T20 World Cup semi – final: ರನ್ ಔಟ್ ಆದ ಹತಾಶೆಯಲ್ಲಿ ಬ್ಯಾಟ್ ಬಿಸಾಡಿದ ಅರ್ಮಾನ್ ಪ್ರೀತ್….! | Watch

ದಕ್ಷಿಣ ಆಫ್ರಿಕದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಗೆಲುವಿನ ಸಮೀಪಕ್ಕೆ ಬಂದಿದ್ದ ಭಾರತ ತಂಡ ಕೊನೆ ಕ್ಷಣದಲ್ಲಿ ಕೈ ಚೆಲ್ಲಿದೆ. ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಟೀಮ್ ಇಂಡಿಯಾ ನಾಯಕಿ ಅರ್ಮಾನ್ ಪ್ರೀತ್ ಕೌರ್ ದುರದೃಷ್ಟಕರ ರೀತಿಯಲ್ಲಿ ರನ್ ಔಟ್ ಆದಕಾರಣ ಸೋಲನ್ನಪ್ಪಬೇಕಾಯಿತು.

ಫೆಬ್ರವರಿ 23ರಂದು ಕೇಪ್ ಟೌನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ನಡೆಯುವಾಗ 173 ರನ್ ಗಳ ಗುರಿಯನ್ನು ಭಾರತ ಮಹಿಳೆಯರ ತಂಡ ಬೆನ್ನತ್ತಿತ್ತು. ಅರ್ಮಾನ್ ಪ್ರೀತ್ 52 ರನ್ ಗಳಿಸಿ ಭಾರತವನ್ನು ಗೆಲುವಿನ ಸಮೀಪಕ್ಕೆ ಒಯ್ದಿದ್ದರು.

ಆದರೆ ಪಂದ್ಯದ 15ನೇ ಓವರ್ನಲ್ಲಿ ಅರ್ಮಾನ್ ಪ್ರೀತ್ ಎರಡು ರನ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇನ್ನೇನು ಅವರು ಬ್ಯಾಟನ್ನು ಸ್ಕ್ರೀಜ್ ನಲ್ಲಿ ಇಡಬೇಕು ಎನ್ನುವಾಗ ಸ್ಟ್ರಕ್ ಆದ ಕಾರಣ ಔಟ್ ಆಗಬೇಕಾಯಿತು. ಮೂರನೇ ಅಂಪೈರ್ ನಿಂದ ಈ ತೀರ್ಪು ಬಂದ ಬಳಿಕ ಹತಾಶೆಗೊಂಡ ಅರ್ಮಾನ್ ತಮ್ಮ ಬ್ಯಾಟನ್ನು ಎಸೆದಿದ್ದಾರೆ. ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

https://www.youtube.com/watch?v=o5Im1aAzje8

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read