ALERT ‘: ಮನೆಯಲ್ಲಿ ‘ನೈಟಿ’ ಧರಿಸುವ ಮಹಿಳೆಯರೇ ಎಚ್ಚರ : ಈ ಆರೋಗ್ಯ ಸಮಸ್ಯೆಗಳು ಬರಬಹುದು.!

ಹೆಚ್ಚಿನ ಮಹಿಳೆಯರು ಮನೆಯಲ್ಲಿದ್ದಾಗ ನೈಟಿಗಳನ್ನು ಧರಿಸುತ್ತಾರೆ. ನೈಟಿಗಳನ್ನು ಧರಿಸುವುದು ಹಲವರಿಗೆ ಕಂಫರ್ಟ್ ಫೀಲ್ ಕೊಡುತ್ತದೆ.ಹೆಚ್ಚಾಗಿ ಹತ್ತಿ ನೈಟಿಗಳನ್ನು ಅನೇಕರು ಇಷ್ಟಪಡುತ್ತಾರೆ. ನೈಟಿಗಳನ್ನು ಧರಿಸುವುದರಿಂದ ಗಾಳಿ ಚೆನ್ನಾಗಿ ಆಡುತ್ತದೆ. ಇದನ್ನು ತೊಳೆಯುವುದು ಸಹ ಸುಲಭ. ಸೀರೆಗಳನ್ನು ತೊಳೆಯಲು ಸ್ವಲ್ಪ ಕಷ್ಟವಾಗಬಹುದು. ಪ್ರಯೋಜನಗಳು ಇರುವಂತೆಯೇ ನೈಟಿಗಳನ್ನು ಧರಿಸುವುದರಿಂದ ಅನಾನುಕೂಲಗಳೂ ಇವೆ.

* ನೈಟಿ ಧರಿಸುವ ಮಹಿಳೆಯರು ತಮ್ಮ ಆರಾಮ, ವೈಯಕ್ತಿಕ ಶೈಲಿ ಮತ್ತು ಆತ್ಮವಿಶ್ವಾಸಕ್ಕೆ ಆದ್ಯತೆ ನೀಡುತ್ತಾರೆ, ಇದು ಹಗಲು ಅಥವಾ ರಾತ್ರಿಯೆನ್ನದೆ ಮನೆಯಲ್ಲಿ ಧರಿಸಲು ಅನುಕೂಲಕರವಾದ, ಉಸಿರಾಡುವ (breathable) ಮತ್ತು ಸಡಿಲವಾದ ಉಡುಪಾಗಿದೆ. ಆದರೆ, ಇದನ್ನು ಹೊರಗಿನ ಕೆಲಸಗಳಿಗೆ ಧರಿಸುವುದು ಸಂಪ್ರದಾಯಕ್ಕೆ ವಿರುದ್ಧವೆನಿಸಬಹುದು ಮತ್ತು ಆರೋಗ್ಯದ ದೃಷ್ಟಿಯಿಂದ ನಿರಂತರ ಬಳಕೆಯಿಂದ ಕೆಲವು ಸಮಸ್ಯೆಗಳಾಗಬಹುದು ಎಂದು ಕೆಲವು ವರದಿಗಳು ಹೇಳುತ್ತವೆ, ಆದ್ದರಿಂದ ಮನೆಯಲ್ಲಿದ್ದಾಗ ಅಥವಾ ರಾತ್ರಿ ನಿದ್ದೆಗೆ ಮಾತ್ರ ಸೂಕ್ತ ಎಂದು ಸಲಹೆ ನೀಡಲಾಗುತ್ತದೆ.

* ನಿರಂತರವಾಗಿ ಸಡಿಲವಾದ ನೈಟಿ ಧರಿಸುವುದರಿಂದ ಹೊಟ್ಟೆ ಮತ್ತು ಎದೆ ಭಾಗ ಜೋತು ಬೀಳುವ ಸಾಧ್ಯತೆ ಇದೆ, ಮತ್ತು ಕೆಲವು ಸಂದರ್ಭಗಳಲ್ಲಿ ಇದು ರಕ್ತದೊತ್ತಡದಂತಹ ಸಮಸ್ಯೆಗಳಿಗೂ ಕಾರಣವಾಗಬಹುದು.

*ನೈಟಿಗಳನ್ನು ಕಡಿಮೆ ಗುಣಮಟ್ಟದ ಬಟ್ಟೆಗಳಿಂದ ತಯಾರಿಸಿದ್ದರೆ. ಅವು ಚರ್ಮದ ಮೇಲೆ ಅಲರ್ಜಿಯನ್ನು ಉಂಟುಮಾಡುತ್ತವೆ. ಇದು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.

*ಸರಿಯಾದ ಸಮಯಕ್ಕೆ ನೈಟಿ ತೊಳೆಯದಿದ್ದರೆ ಬ್ಯಾಕ್ಟೀರಿಯಾ ಉಂಟಾಗುತ್ತದೆ , ಇದು ತೊಂದರೆಗೆ ಕಾರಣವಾಗಬಹುದು.

*ಕೆಲವು ನೈಟಿಗಳು ನಿಮಗೆ ಸಾಕಷ್ಟು ಬೆವರುವಂತೆ ಮಾಡುತ್ತವೆ. ಅಂತಹ ನೈಟಿಗಳನ್ನು ಧರಿಸುವುದರಿಂದ ತೊಂದರೆಗಳು ಉಂಟಾಗಬಹುದು.

*ಹತ್ತಿಯ ನೈಟಿಗಳಿಗೆ ಆದ್ಯತೆ ನೀಡುವುದು ಉತ್ತಮ ಮತ್ತು ಕಾಲಕಾಲಕ್ಕೆ ಅವುಗಳನ್ನು ತೊಳೆಯಬೇಕು.

*ನೈಟಿಗಳನ್ನು ಖರೀದಿಸುವಾಗ ಗುಣಮಟ್ಟದವುಗಳನ್ನು ಮಾತ್ರ ತೆಗೆದುಕೊಳ್ಳಿ. ಕಡಿಮೆ ರೇಟಿನ ನೈಟಿ ಖರೀದಿಸಬೇಡಿ.

*ನೈಟಿಯನ್ನು ರಾತ್ರಿ ಸಮಯದಲ್ಲಿ ಹಾಗೂ ಕೆಲವೊಂದು ಅನಿವಾರ್ಯ ಸಮಯದಲ್ಲಿ ಧರಿಸುವುದು ಒಳಿತು. ಸೀರೆಗೆ ಹೆಚ್ಚಿನ ಪ್ರಾಶಸ್ತ್ರ್ಯ ಕೊಡುವುದು ಒಳಿತು.

*ಆರಾಮದಾಯಕ ನಿದ್ರೆಗಾಗಿ ಹತ್ತಿ (cotton) ಅಥವಾ ಮೃದುವಾದ ಬಟ್ಟೆಗಳಿಂದ ಮಾಡಿದ ನೈಟಿಗಳು ಉತ್ತಮ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read