ಎಲ್ಲಾ ವಯೋಮಾನದ ಮಹಿಳೆಯರು ತಪ್ಪದೇ ಸೇವಿಸಬೇಕು ಈ ಎಲ್ಲಾ ʼಆಹಾರʼ

ಬಹಳಷ್ಟು ಮಹಿಳೆಯರು ಸದಾ ಅಲ್ಲಿ ನೋವು, ಇಲ್ಲಿ ನೋವು ಎಂದು ಹೇಳುತ್ತಲೇ ಇರುತ್ತಾರೆ. ಇದಕ್ಕೆ ಮುಖ್ಯ ಕಾರಣ ಸಮತೋಲನ ಆಹಾರ ಸೇವಿಸದೇ ಇರುವುದು.

ಹೀಗಾಗಿ ಎಲ್ಲಾ ವಯೋಮಾನದ ಮಹಿಳೆಯರು ತಪ್ಪದೇ ತಮ್ಮ ಆಹಾರ ಸೇವನೆಯತ್ತ ಗಮನ ಹರಿಸಲೇಬೇಕು.

* ಮಹಿಳೆಯರಿಗೆ ದಿನಕ್ಕೆ ಸಾವಿರ ಮಿಲಿಗ್ರಾಂನಷ್ಟು ಕ್ಯಾಲ್ಸಿಯಂ ಅಗತ್ಯ. ಹೀಗಾಗಿ ಕೊಬ್ಬು ಕಡಿಮೆ ಇರುವ ಹಾಲನ್ನು ತಪ್ಪದೆ ಸೇವಿಸಬೇಕು. ಹಾಗೂ ಮೊಸರು ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು.

* ಕಬ್ಬಿಣಾಂಶದ ಕೊರತೆ ಎದುರಾಗದಿರಲು ಆಹಾರದಲ್ಲಿ ಕಾಳು, ಬೇಳೆಯು ಶೇಕಡಾ 30 ರಷ್ಟು ಪ್ರಮಾಣದಲ್ಲಿ ಇರುವುದಕ್ಕೆ ಆದ್ಯತೆ ನೀಡಬೇಕು.

* ಆರೋಗ್ಯಕರ ಚರ್ಮಕ್ಕಾಗಿ ವಿಟಮಿನ್ ಸಿ ಹೆಚ್ಚಾಗಿರುವ ಕಿತ್ತಳೆ, ಸೀಬೆಯಂತಹ ಹಣ್ಣುಗಳನ್ನು ಸೇವಿಸಬೇಕು.

* ಬಾಳೆಹಣ್ಣಿನಲ್ಲಿರುವ ಪೊಟಾಷಿಯಂ ರಕ್ತದೊತ್ತಡವನ್ನು ಕಡಿಮೆ ಮಾಡಿದರೆ, ಆಲೂಗಡ್ಡೆ ಯಲ್ಲಿರುವ ಪಿಷ್ಟ ಪದಾರ್ಥವು ಕೊಲೆಸ್ಟ್ರಾಲನ್ನು ತಡೆಗಟ್ಟುತ್ತದೆ.

* ಮೂಳೆಗಳ ಆರೋಗ್ಯಕ್ಕಾಗಿ ಪಾಲಾಕ್ ಸೊಪ್ಪನ್ನು ಸೇವಿಸಬೇಕು. ಹಾಗೂ ಒತ್ತಡ ನಿವಾರಣೆಗಾಗಿ ಸುಮಾರು 30 ಗ್ರಾಂ ನಷ್ಟು ಡಾರ್ಕ್ ಚಾಕ್ಲೇಟ್ ಸೇವಿಸುವುದು ಒಳಿತು.

* ಒಮೆಗಾ 3 ಫ್ಯಾಟಿ ಆಸಿಡ್ ದೇಹಕ್ಕೆ ಅಗತ್ಯ. ಮೀನಿನಲ್ಲಿ ಇದು ಹೇರಳವಾಗಿರುತ್ತದೆ ಮತ್ತು ನಟ್ಸ್, ಗೋಡಂಬಿ, ಬಾದಾಮಿ ಇವುಗಳಲ್ಲಿ ಅಧಿಕವಾಗಿರುವುದರಿಂದ ಆಹಾರದಲ್ಲಿ ಇವುಗಳನ್ನು ಸೇರ್ಪಡೆ ಮಾಡಬೇಕು.

* ಅಣಬೆಯನ್ನು ಆಹಾರದ ಭಾಗವಾಗಿ ಮಾಡಿಕೊಂಡರೆ ಸ್ತನ ಕ್ಯಾನ್ಸರ್ ಉಂಟಾಗುವ ಪ್ರಮಾಣ ಕಡಿಮೆಯಾಗುತ್ತದೆ.

* ಕ್ಯಾಪ್ಸಿಕಂ ಮತ್ತು ಕ್ಯಾರೆಟ್ ಅನ್ನು ತಿನ್ನುವುದರಿಂದ ಕಣ್ಣಿನ ಸ್ನಾಯುಗಳು ಆರೋಗ್ಯವಾಗಿರುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read