ಟಿಕೆಟ್ ಇಲ್ಲದ ಮಹಿಳೆಯರನ್ನು ಇಳಿಸುವಂತಿಲ್ಲ: ರೈಲ್ವೆ ಇಲಾಖೆಯಿಂದ ಮಹತ್ವದ ಆದೇಶ

ಪ್ರತಿದಿನ ಸಾವಿರಾರು ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ, ಅದರಲ್ಲಿ ಮಹಿಳೆಯರೂ ಸೇರಿದ್ದಾರೆ. ಅದಕ್ಕಾಗಿಯೇ ರೈಲ್ವೆ ಇಲಾಖೆಯು ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಕಾನೂನುಗಳನ್ನು ಮಾಡಿದೆ. ರೈಲಿನಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾನೂನುಗಳನ್ನು ವಿಶೇಷವಾಗಿ ಮಾಡಲಾಗಿದೆ.

ಭಾರತೀಯ ರೈಲ್ವೆ ಕಾಯ್ದೆ 1981 ರ ಸೆಕ್ಷನ್ 139 ರ ಪ್ರಕಾರ, ಟಿಕೆಟ್ ಇಲ್ಲದೆ ಪ್ರಯಾಣಿಸುವ ಮಹಿಳೆಯರನ್ನು ಟಿಕೆಟ್ ಪರೀಕ್ಷಕರು ಬಲವಂತವಾಗಿ ಇಳಿಸುವ ಹಾಗಿಲ್ಲ. ದಂಡ ಪಾವತಿಸುವ ಮೂಲಕ ಪ್ರಯಾಣ ಮುಂದುವರಿಸಬಹುದು. ಮಹಿಳೆಯನ್ನು ಇಳಿಸಬೇಕಾದರೆ ಮಹಿಳಾ ಪೊಲೀಸ್ ಅಧಿಕಾರಿ ಇರಬೇಕು. 12 ವರ್ಷದೊಳಗಿನ ಹುಡುಗ, ತಾಯಿಯೊಂದಿಗೆ ಮಹಿಳಾ ವರ್ಗದಲ್ಲಿ ಪ್ರಯಾಣಿಸಬಹುದು. ಸೇನಾ ಸಿಬ್ಬಂದಿಗೆ ಮಹಿಳಾ ವರ್ಗಕ್ಕೆ ಪ್ರವೇಶವಿಲ್ಲ. ದೂರದ ಪ್ರಯಾಣದಲ್ಲಿ ಸ್ಲೀಪರ್ ಮತ್ತು ಎಸಿ ಮೂರನೇ ವರ್ಗದಲ್ಲಿ 6 ಆಸನಗಳನ್ನು ಕಾಯ್ದಿರಿಸಬೇಕು. ಮಹಿಳೆಯರ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಿರುಕುಳ ನೀಡಿದರೆ ದೂರು ಸಂಖ್ಯೆಗೆ ಕರೆ ಮಾಡಬಹುದು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ದೂರು ನೀಡಬಹುದು.

ರೈಲು ನಿಲ್ದಾಣಗಳಲ್ಲಿಯೂ ಮಹಿಳೆಯರ ಮೇಲೆ ಅನೇಕ ರೀತಿಯ ಕಿರುಕುಳ, ದೌರ್ಜನ್ಯ ನಡೆಯುತ್ತವೆ. ಹೀಗಾಗಿ, ಸರಿಯಾದ ದೀಪದ ವ್ಯವಸ್ಥೆ, ಕಾಯಲು ಸೂಕ್ತ ಸ್ಥಳ, ಉತ್ತಮ ಶೌಚಾಲಯಗಳ ವ್ಯವಸ್ಥೆ ಜತೆ ಇವೆಲ್ಲದರ ಬಗ್ಗೆ ಗಮನಹರಿಸಲು ‍ಪೊಲೀಸರು, ರೈಲ್ವೆ ಸಿಬ್ಬಂದಿ ಇರುವುದು ಅವಶ್ಯಕ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read