ಮಹಿಳೆಯರೇ ಸೀರೆ ಮತ್ತು ಚಿನ್ನ ಬೀರುವಿನಲ್ಲಿ ಇಡುವಾಗ ಮಾಡಲೇಬೇಡಿ ಈ ತಪ್ಪು…..!

ಮಹಿಳೆಯರಿಗೆ ಸೀರೆ ಹಾಗೂ ಬಂಗಾರವೆಂದರೆ ಬಹಳ ಪ್ರಿಯ. ಅವರು ತಮ್ಮ ಸೀರೆ ಹಾಗೂ ಬಂಗಾರವನ್ನು ಬೀರುವಿನಲ್ಲಿ ಸುರಕ್ಷಿತವಾಗಿ ಇಡುತ್ತಾರೆ. ಆದರೆ ಆ ವೇಳೆ ಅವರು ಮಾಡುವಂತಹ ಕೆಲವು ತಪ್ಪುಗಳಿಂದ ಅವರಿಗೆ ಸೀರೆ ಮತ್ತು ಬಂಗಾರವನ್ನು ಮತ್ತೆ ಮತ್ತೆ ಖರೀದಿಸುವ ಯೋಗ ಬರುವುದಿಲ್ಲ. ಹಾಗಾಗಿ ಈ ಬಗ್ಗೆ ಮಹಿಳೆಯರು ತಿಳಿದುಕೊಳ್ಳಿ.

ಮಹಿಳೆಯರು ಧರಿಸುವ ಕೆಲವು ಸೀರೆಗಳನ್ನು ಒಗೆಯುವ ಹಾಗಿರುವುದಿಲ್ಲ. ಆಗ ಅವರು ಹಾಗೇ ಅದನ್ನು ಬೀರುವಿನಲ್ಲಿ ಇಡುತ್ತಾರೆ. ಇದರಿಂದ ಶುಕ್ರನ ಅನುಗ್ರಹ ನಿಮಗೆ ದೊರೆಯುವುದಿಲ್ಲ. ಶುಕ್ರನ ಅನುಗ್ರಹವಿಲ್ಲದೇ ನಿಮಗೆ ಸೀರೆ ಖರೀದಿಸುವ ಯೋಗ ಬರುವುದಿಲ್ಲ. ಹಾಗಾಗಿ ಉಟ್ಟ ಸೀರೆಗಳನ್ನು ಬೀರುವಿನಲ್ಲಿ ಇಡುವ ಮೊದಲು ಅದರ ಸೆರಗಿನ ಚಿಕ್ಕ ಭಾಗವನ್ನು ನೀರಿನಲ್ಲಿ ಒದ್ದೆ ಮಾಡಿ ಬಿಸಿಲಿನಲ್ಲಿ ಒಣಗಿಸಿ ಇಡಿ. ಇದರಿಂದ ಶುಕ್ರನ ಅನುಗ್ರಹ ನಿಮಗೆ ಸಿಗುತ್ತದೆ.

ಹಾಗೇ ಬಂಗಾರವನ್ನು ಕೆಲವರು ಬಟ್ಟೆಯ ಒಳಗೆ ಮುಚ್ಚಿಡುತ್ತಾರೆ. ಇದು ತುಂಬಾ ತಪ್ಪು. ಇದರಿಂದ ಲಕ್ಷ್ಮಿದೇವಿಯ ಕೋಪಕ್ಕೆ ಗುರಿಯಾಗುತ್ತೀರಿ. ಹಾಗಾಗಿ ಬಂಗಾರವನ್ನು ಮರದ ಪೆಟ್ಟಿಗೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಇದರಿಂದ ಲಕ್ಷ್ಮಿಯ ಅನುಗ್ರಹ ದೊರೆತು ಚಿನ್ನ ಖರೀದಿಸುವ ಯೋಗ ಬರುತ್ತದೆಯಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read