ಹಲವಾರು ಕಲಾವಿದರು ತಮ್ಮ ಕಲಾಕೃತಿಗಳನ್ನು ತಯಾರಿಸಲು ಮತ್ತು ಪ್ರಸ್ತುತಪಡಿಸಲು ವಿವಿಧ ವಿಧಾನಗಳನ್ನು ಹೊಂದಿದ್ದಾರೆ. ಆಹಾರದಿಂದ ಶಿಲ್ಪಗಳನ್ನು ತಯಾರಿಸುವುದರಿಂದ ಹಿಡಿದು ಮೇಕ್ಅಪ್ ಬಳಸಿ ಅದ್ಭುತವಾದ ವರ್ಣಚಿತ್ರಗಳನ್ನು ಬಿಡಿಸುವವರೆಗೆ, ಅನೇಕ ಜನರು ಸೃಜನಶೀಲ ವಿಧಾನಗಳನ್ನು ಹೊಂದಿದ್ದು ಅದು ಬೆರಗುಗೊಳಿಸುತ್ತದೆ.
ಅಂಥದ್ದೇ ಮತ್ತೋರ್ವ ಕಲಾವಿದೆಯ ವಿಡಿಯೋ ವೈರಲ್ ಆಗಿದೆ. ಈ ಕಲಾವಿದೆ ಮಳೆಗಾಲದ ಕಾರಿನ ಕಿಟಕಿಯ ಚಿತ್ರವನ್ನು ಆಯಿಲ್ ಪೇಂಟಿಂಗ್‌ನ ಮೂಲಕ ಚಿತ್ರಿಸಿದ್ದು, ನೆಟಿಜನ್‌ಗಳನ್ನು ಬೆರಗುಗೊಳಿಸುತ್ತಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
“ಮಳೆಯ ಕಾರಿನ ಕಿಟಕಿಯ ನನ್ನ ತೈಲ ವರ್ಣಚಿತ್ರ” ಎಂದು 25 ವರ್ಷದ ರಿಯೋನಾ ಬುಥೆಲ್ಲೊ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ತೈಲ ವರ್ಣಚಿತ್ರವು ನೀಲಿ, ಕೆಂಪು, ಕಪ್ಪು ಮತ್ತು ಬಿಳಿ ಛಾಯೆಗಳನ್ನು ತೋರಿಸುತ್ತದೆ. ಚಿತ್ರಕಲೆ ಎಷ್ಟು ನೈಜವಾಗಿ ಕಾಣುತ್ತದೆ ಎಂದರೆ ಅದು ನಿಜವೇ ಎನ್ನುವ ಹಾಗೆ ಕಾಣಿಸುತ್ತಿದೆ. ಈ ಕಲಾವಿದೆಯ ಕಲೆಗೆ ನೆಟ್ಟಿಗರು ಫಿದಾ ಆಗಿದ್ದು, ಥರಹೇವಾರಿ ಕಮೆಂಟ್ಸ್ಗಳ ಸುರಿಮಳೆಯಾಗಿದೆ.
https://twitter.com/rionabuthello/status/1646891738600988673?ref_src=twsrc%5Etfw%7Ctwcamp%5Etweetembed%7Ctwterm%5E1646891738600988673%7Ctwgr%5Ee967a6afa63ac46f59e077ad0b61827469b2dd5a%7Ctwcon%5Es1_&ref_url=https%3A%2F%2Fwww.hindustantimes.com%2Ftrending%2Fwomans-oil-painting-of-a-rainy-car-window-stuns-netizens-101681647836435.html