Video| ಬಾಸ್ಕೆಟ್​ಬಾಲ್​ ಪಂದ್ಯದ ವೇಳೆ ಯುವತಿ ನೃತ್ಯಕ್ಕೆ ನೆಟ್ಟಿಗರು ಫಿದಾ

ಕ್ಯಾಲಿಫೋರ್ನಿಯಾ: ಜನರು ಉತ್ಸಾಹಭರಿತ ಹಾಡುಗಳಿಗೆ ನೃತ್ಯ ಮಾಡುತ್ತಿರುವ ವೀಡಿಯೊಗಳು ಇಂಟರ್ನೆಟ್‌ನ ಪ್ರಮುಖ ಭಾಗವನ್ನು ಒಳಗೊಂಡಿವೆ. ಆದರೆ ಎಲ್ಲವನ್ನೂ ಮೀರಿಸುವಂತಹ ಕೆಲವು ವಿಡಿಯೋಗಳು ಸಕತ್​ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸುದ್ದಿ ಮಾಡುತ್ತಿದೆ.

ಅನಿಶಾ ಥಾಯ್ ಅವರು Instagram ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನು ಕ್ಯಾಲಿಫೋರ್ನಿಯಾದ ಚೇಸ್ ಸೆಂಟರ್‌ನಲ್ಲಿ ತೆಗೆದುಕೊಳ್ಳಲಾಗಿದೆ. ಬಾಸ್ಕೆಟ್​ಬಾಲ್​ ನಡೆಯುತ್ತಿರುವ ವೇಳೆ, ಯುವತಿ ಈ ರೀತಿ ನೃತ್ಯ ಮಾಡಿದ್ದಾಳೆ. ವಿರಾಮದ ವೇಳೆಯಲ್ಲಿ ಅನಿಶಾ ಎಂಬ ಯುವತಿ ಡ್ಯಾನ್ಸ್ ಮಾಡುತ್ತಿರುವುದು ವಿಡಿಯೋದಲ್ಲಿ ನೋಡಬಹುದು.

ಇದು ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗಿದೆ. ಆಟ ನಡೆಯುತ್ತಿರುವ ನಡುವೆ ಮಾಡಿರುವ ಈ ನೃತ್ಯವನ್ನೇ ದೊಡ್ಡ ಪರದೆಗಳ ಮೇಲೆ ಹೈಲೈಟ್​ ಮಾಡಿರುವ ಕಾರಣ, ಇದು ಇನ್ನಷ್ಟು ವೈರಲ್ ಆಗಿದೆ. ಹೆಚ್ಚಿನವರು ಈಕೆಯ ನೃತ್ಯಕ್ಕೆ ಫಿದಾ ಆಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read