SHOCKING NEWS: ಮಗು ಅಳುವ ಧ್ವನಿಗೆ ನಿದ್ದೆ ಬರಲ್ಲ ಎಂದು ಅಣ್ಣನ ಮಗಳನ್ನೇ ಕೊಲೆಗೈದ ಮಹಿಳೆ

ಭೋಪಾಲ್: ಇತ್ತೀಚಿನ ದಿನಗಳಲ್ಲಿ ಮನುಷ್ಯ ತಾಳ್ಮೆ ಮಾತ್ರವಲ್ಲ ಮನುಷತ್ವವನ್ನೂ ಕಳೆದುಕೊಳ್ಳುತ್ತಿರುವ ಅದೆಷ್ಟೋ ಘಟನೆಗಳು ಕಣ್ಮುಂದೆಯೇ ನಡೆಯುತ್ತಿರುವುದು ದುರಂತ. ಇಲ್ಲೋರ್ವ ಮಹಿಳೆ ಪುಟ್ಟ ಮಗುವಿನ ಅಳುವಿನ ಶಬ್ಧಕ್ಕೆ ನಿದ್ದೆ ಬರಲ್ಲ ಎಂದು ಮಗುವನ್ನೇ ಕೊಂದು ಹಾಕಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಜಬಲ್ ಪುರದ ಹನುಮಂತಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೀವ್ ನಗರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಮಗು ಅಳುವಿನ ಶಬ್ಧಕ್ಕೆ ಕಿರಿಕಿರಿಯಾಗುತ್ತದೆ ಎಂದು ಅಣ್ಣನ ಮಗಳನ್ನೇ ಮಹಿಳೆ ಹೊಡೆದುಕೊಂದಿದ್ದಾಳೆ.

ಮನೆಯಲ್ಲಿ ಇದ್ದಕ್ಕಿದ್ದಂತೆ ಮಗು ನಾಪತ್ತೆಯಾದ ಕಾರಣ ಮಗುವಿನ ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ ಆದರೂ ಪತ್ತೆಯಾಗಿಲ್ಲ. ಗಾಬರಿಯಿಂದ ಮಗುವಿನ ತಂದೆ ಶಕಿಲ್ ಮೊಹಮ್ಮದ್ ತಮ್ಮ ಮಗು ನಾಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೆ ಬಳಿಯ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದರೂ ಮಗುವಿನ ಸುಳಿವಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ಮನೆಯಲ್ಲಿಯೇ ಶೋಧ ನಡೆಸಿದ್ದಾರೆ.

ಮನೆಯ ಸೋಫಾ ಕೆಳಗೆ ಮಗುವಿನ ಶವ ಪತ್ತೆಯಾಗಿದೆ. ಮನೆಯವರನ್ನು ತೀವ್ರ ವಿಚಾರಣೆ ನಡೆಸಿದಾಗ ಮಗುವಿನ ಅತ್ತೆ ಶಕಿಲ್ ಅವರ ಸಹೋದರಿಯೇ ಈ ಕೃತ್ಯವೆಸಗಿರುವುದು ಗೊತ್ತಾಗಿದೆ.

ಶಕಿಲ್ ಸಹೋದರಿ ಕೂಡ ಅದೇ ಮನೆಯಲ್ಲಿ ವಾಸವಾಗಿದ್ದರು. ಮಗು ತನ್ನ ಅತ್ತೆಯ ಕೋಣೆಗೆ ಹೋಗಿ ಅತ್ತೆ ಜೊತೆಯೇ ಮಲಗುವುದಾಗಿ ಹೇಳಿದ್ದಾಳೆ. ಅತ್ತೆ ಇದಕ್ಕೆ ನಿರಾಕರಿಸಿ ನಿನ್ನ ಮ್ಮನ ಜೊತೆ ಮಲಗುವಂತೆ ಹೇಳಿದ್ದಾಳೆ ಆದರೆ ಕೇಳದ ಮಗು ಹಠ ಹಿಡಿದು ತಾನು ಇಲ್ಲೇ ಮಲಗುವುದಾಗಿ ಹೇಳಿ ಅಳಲಾರಂಭಿಸಿದ್ದಾಳೆ. ಮಗುವಿನ ಅಳು ಕೇಳಿ ಕೋಪಗೊಂಡ ಅತ್ತೆ ಮನಬಂದತೆ ಥಳಿಸಿ ಕತ್ತು ಹಿಸುಕಿ ಸಾಯಿಸಿದ್ದಾಳೆ. ಬಳಿಕ ಶವವನ್ನು ಸೋಫಾ ಕೆಳಗೆ ಬಚ್ಚಿಟ್ಟಿದ್ದಾಳೆ. ಸಧ್ಯ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read