ಸ್ಪೂರ್ತಿದಾಯಕವಾಗಿದೆ ಈ ಸ್ಟೋರಿ: ಮಗುವಿಗೆ ಜನ್ಮ ನೀಡಿದ ದಿನವೇ 10 ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ….!

ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳ ನಂತರ 10 ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆದ ಮಹಿಳೆಯ ನಡೆ ಸ್ಫೂರ್ತಿದಾಯಕವಾಗಿದೆ. ಬಿಹಾರದಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಆಂಬ್ಯುಲೆನ್ಸ್ ನಲ್ಲಿ ಬಂದ ಮಹಿಳೆ 10  ನೇ ತರಗತಿ ಪರೀಕ್ಷೆ ಬರೆದಿದ್ದಾರೆ.

ಬಂಕಾ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ರುಕ್ಮಿಣಿ ಕುಮಾರಿ (22) ಅವರು ಬೆಳಿಗ್ಗೆ ಮಗುವಿಗೆ ಜನ್ಮ ನೀಡಿದ್ದು, ಮೂರು ಗಂಟೆಗಳ ನಂತರ ವಿಜ್ಞಾನ ಪತ್ರಿಕೆಯನ್ನು ಬರೆದಿದ್ದಾರೆ.

ಮಹಿಳೆಯರ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡುತ್ತಿರುವುದು ಭಾರೀ ಸದ್ದು ಮಾಡಿದೆ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ. ಪರಿಶಿಷ್ಟ ಜಾತಿಗೆ ಸೇರಿದ ರುಕ್ಮಿಣಿ ಅವರು ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಪವನ್ ಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ರುಕ್ಮಿಣಿ, ಮಂಗಳವಾರದಂದು ಗಣಿತ ಪತ್ರಿಕೆ ಬರೆದಾಗ ಸ್ವಲ್ಪ ಅಸ್ವಸ್ಥತೆ ಇತ್ತು. ಮರುದಿನ ನಿಗದಿಯಾಗಿದ್ದ ವಿಜ್ಞಾನ ಪತ್ರಿಕೆಯ ಬಗ್ಗೆ ಉತ್ಸುಕಳಾಗಿದ್ದ. ಆದರೆ ಮಂಗಳವಾರ ತಡರಾತ್ರಿ ನಾನು ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದೆ. ಮರುದಿನ ವಿಜ್ಞಾನ ಪರೀಕ್ಷೆ ಬರೆದುದ್ದಾಗಿ ತಿಳಿಸಿದರು. ರುಕ್ಮಿಣಿ ತನ್ನ ಮಗ ದೊಡ್ಡವನಾದ ಮೇಲೆ ಚೆನ್ನಾಗಿ ಓದಬೇಕು ಎಂದು ಬಯಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read