Watch: ಸಹ ಪ್ರಯಾಣಿಕರ ಮೇಲೆ ಪೆಪ್ಪರ್‌ ಸ್ಪ್ರೇ ಮಾಡಿದ ಮಹಿಳೆ

ದೆಹಲಿ ಮೆಟ್ರೋ ರೈಲೊಂದರಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರು ಕಚ್ಚಾಟಕ್ಕಿಳಿದ ಸಂದರ್ಭದ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ. ದೆಹಲಿ ಬಿಜೆಪಿ ನಾಯಕ ತೇಜೀಂದರ್‌ ಪಾಲ್ ಬಗ್ಗಾ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

ಮೊದಲು ಇಬ್ಬರೂ ಮಹಿಳೆಯರು ಪರಸ್ಪರ ಬೈದಾಡಿಕೊಳ್ಳುತ್ತಾರೆ. ನೋಡ ನೋಡುತ್ತಲೇ ಇವರಲ್ಲಿ ಒಬ್ಬರು ಪೆಪ್ಪರ್‌ ಸ್ಪ್ರೇ ತೆಗೆದು ಮತ್ತೊಬ್ಬರ ಮೇಲೆ ಪ್ರಯೋಗ ಮಾಡುತ್ತಾರೆ. ಅಕ್ಕಪಕ್ಕದಲ್ಲಿದ್ದ ಪ್ರಯಾಣಿಕರು ಕೆಮ್ಮಲು ಆರಂಭಿಸುತ್ತಲೇ ಇಬ್ಬರೂ ಶಾಂತರಾಗಿ ತಮ್ಮ ಪಾಡಿಗೆ ತಾವು ಕುಳಿತುಕೊಳ್ಳುತ್ತಾರೆ.

ಪರಸ್ಪರ ಅಪರಿಚಿತರಾದ ಈ ಮಹಿಳೆಯರ ಕಚ್ಚಾಟದ ವಿಡಿಯೋಗೆ 8.2 ಲಕ್ಷ ವೀಕ್ಷಣೆಗಳು ಸಿಕ್ಕಿವೆ.

“ಮುಂಬೈ ಲೋಕಲ್‌ ರೈಲುಗಳ ಮಹಿಳೆಯರ ಬೋಗಿಗಳಲ್ಲೂ ಇದಕ್ಕಿಂತ ಭಿನ್ನವಾದ ಪರಿಸ್ಥಿತಿ ಇರುವುದಿಲ್ಲ. ಕೇವಲ ಕಚ್ಚಾಟದ ಮಾಧ್ಯಮ ಬೇರೆ ಇರುತ್ತದೆ,” ಎಂದು ಟ್ವಿಟ್ಟಿಗರೊಬ್ಬರು ಬರೆದಿದ್ದಾರೆ.

https://twitter.com/AnandGupte14/status/1642734350562390017?ref_src=twsrc%5Etfw%7Ctwcamp%5Etweetembed%7Ctwterm%5E1642734350562390017%7Ctwgr%5Eda1f85660a0d26bdc0bfc17c9c566374815d6cd0%7Ctwcon%5Es1_&ref_url=https%3A%2F%2Fwww.news18.com%2Fviral%2Fviral-woman-uses-pepper-spray-on-co-passenger-after-argument-escalates-in-delhi-metro-7460431.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read