ಬೆಂಗಳೂರು: ಡೆತ್ ನೋಟ್ ಬರೆದಿಟ್ತು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.
ಇಲ್ಲಿನ ತೋಟದಗುಡ್ಡದ ಮನೆಯಲ್ಲಿ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೌಭಾಗ್ಯ (36) ಆತ್ಮಹತ್ಯೆಗೆ ಶರಣಾದ ಮಹಿಳೆ. ಎರಡು ವರ್ಷಗಳ ಹಿಂದೆ ಪತ್ ಸಾವನ್ನಪ್ಪಿದ್ದರು. ಪತಿ ಮರಣದ ಬಳಿಕ ಮಾನಸಿಕವಾಗಿ ತೀವ್ರವಾಗಿ ಸೌಭಾಗ್ಯ ನೊಂದಿದ್ದರು.
ಮಾದನಾಯಕನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಜೀವನ ಸಾಗಿಸಲು ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸವಾಯಿತು, ಮನೆಯಾಯಿತು ಎಂದು ತನ್ನಪಾಡಿಗೆ ತಾನು ಜೀವನ ಸಾಗಿಸುತ್ತಿದ್ದ ಸೌಭಾಗ್ಯ ಈಗ ಇದ್ದಕ್ಕಿದ್ದಂತೆ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.
ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
