ಬೆಂಗಳೂರು: ಬೆಂಗಳೂರಿನ ಲಾಲ್ ಬಾಗ್ ಕೆರೆಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಬಾಣಂತಿ ಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ನೇಪಾಅ ಮೂಲದ ಜೇನಿ ಶಾ ಎಂದು ಗುರುತಿಸಲಾಗಿದೆ. ಜೀನಿ ಶಾ ನಾಲ್ಕು ದಿನಗಳ ಹಿಂದೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಮಗು ಆರೋಗ್ಯ ಸರಿಯಿಲ್ಲ ಎಂದು ಜೇನಿ ಶಾ ಮಾನಸಿಕವಾಗಿ ಕುಗ್ಗಿದ್ದರು. ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಜೇನಿ ಶಾ ಲಾಲ್ ಬಾಗ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ಲಾಲ್ ಬಾಗ್ ಕೆರೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಮೃತದೇಹ ನೋಡಿದಾಗ ಪತಿ ಆಕೆಯ ಗುರುತು ಪತ್ತೆ ಮಾಡಿದ್ದು, ತನ್ನ ಪತ್ನಿ ಜೀನಿ ಶಾ ಎಂದು ತಿಳಿಸಿದ್ದಾರೆ.
ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.