ಬೆಳಗಾವಿ : ಪ್ರೀತಿಸಿದ ಹುಡುಗಿ ಜೊತೆ ಯುವಕ ಓಡಿ ಹೋದ ಕಾರಣ ಯುವಕನ ತಾಯಿಯನ್ನ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಘಟನೆ ಸಂಬಂಧ ಇಂದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿದ್ದ ಸ್ಥಳದಲ್ಲಿ ಪೊಲೀಸರು ಪಂಚೆನಾಮೆ ನಡೆಸಿದ್ದಾರೆ. ಬಿಗಿ ಭದ್ರತೆಯಲ್ಲಿ ಮೂವರು ಆರೋಪಿಗಳನ್ನು ಕರೆತಂದು ಪೊಲೀಸರು ಮಹಜರು ನಡೆಸಿದ್ದಾರೆ.
ಯುವತಿ ತಂದೆ-ತಾಯಿ ಸೇರಿ 12 ಜನರ ಮೇಲೆ ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಐಪಿಸಿ 1860ರ ಅಡಿಯಲ್ಲಿ ಸೆಕ್ಷನ್ 143, 147, 148, 341, 342, 327, 324, 323, 307, 452, 427, 352(B) 149 ಮತ್ತು ಆಸ್ತಿ ಹಾನಿ ತಡೆಗಟ್ಟುವ ಕಾಯ್ದೆ 1981 ಅಡಿಯಲ್ಲಿ ಕೇಸ್ ದಾಖಲಾಗಿದೆ.