ಪಾತ್ರೆಯಲ್ಲಿರುವ ಪದಾರ್ಥ ತಿಂದು ವಾಪಸ್‌ ಉಗುಳಿದ ಮಹಿಳೆ: ಥೂ ಎಂದ ನೆಟ್ಟಿಗರು

ಪ್ರಪಂಚದಲ್ಲಿ ಕುತೂಹಲ ಎನ್ನಿಸುವಷ್ಟು ಮಟ್ಟಿಗೆ ಪಾಕಪದ್ಧತಿಗಳಿವೆ. ಅವುಗಳಲ್ಲಿ ಕೆಲವು ಅಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ. ಅಂತಹ ವಿಧಾನಗಳಿಗೆ ಒಗ್ಗಿಕೊಂಡಿರದ ಜನರಿಗೆ ಈ ಆಹಾರ ಪದ್ಧತಿ ನೋಡಿ ಆಘಾತ ತರಬಹುದು. ಅಂಥದ್ದೇ ಒಂದು ಪಾಕ ಪದ್ಧತಿಯ ವಿಡಿಯೋ ಈಗ ವೈರಲ್‌ ಆಗಿದೆ.

ಮಹಿಳೆಯೊಬ್ಬರು ದೊಡ್ಡ ಪಾತ್ರೆಯಲ್ಲಿ ದ್ರವ ಪದಾರ್ಥವೊಂದನ್ನು ಕುದಿಸುವ ವೀಡಿಯೊ ಇದಾಗಿದೆ. ಆದರೆ ನಂತರ ಹೆಚ್ಚಿನವರಿಗೆ ಅಸಹ್ಯ ಎನಿಸುವ ಕೆಲಸವನ್ನು ಈಕೆ ಮಾಡುತ್ತಾಳೆ. ಇದು ಲ್ಯಾಟಿನ್‌ ಅಮೆರಿಕದ ಖ್ಯಾತ ಪಾನೀಯ ಚೀಚಾ ಎನ್ನಲಾಗಿದೆ.

ಈ ಪಾಕ ವಿಧಾನವನ್ನು ಇನ್‌ಸ್ಟಾಗ್ರಾಮ್‌ ಹ್ಯಾಂಡಲ್ mixfood_hunter ನಲ್ಲಿ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಮಹಿಳೆಯೊಬ್ಬರು ತೆರೆದ ಸ್ಥಳದಲ್ಲಿ ಕುಳಿತು ದೊಡ್ಡ ಪಾತ್ರೆಯಲ್ಲಿ ದ್ರವ ಪದಾರ್ಥವನ್ನು ತಯಾರಿಸುತ್ತಿರುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ನಂತರ ಆಕೆ ಆ ದ್ರವ ಪದಾರ್ಥದಲ್ಲಿ ಸ್ವಲ್ಪ ತೆಗೆದು ತನ್ನ ಬಾಯಿಯೊಳಗೆ ಹಾಕುತ್ತಾಳೆ ಮತ್ತು ನಂತರ ಅದನ್ನು ಅದೇ ಪಾತ್ರೆಯಲ್ಲಿ ಉಗುಳುತ್ತಾಳೆ…! ಇದನ್ನು ನೋಡಿ ಹಲವರು ಛೀ ಥೂ ಎಂದು ಕಮೆಂಟ್‌ ಮಾಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read