ನಡುರಸ್ತೆಯಲ್ಲೇ ಬಿಜೆಪಿ ಮುಖಂಡನಿಗೆ ಕಪಾಳಮೋಕ್ಷ ಮಾಡಿದ ಮಹಿಳೆ

ಬಿಜೆಪಿ ಮುಖಂಡನೊಬ್ಬ ನಡುರಸ್ತೆಯಲ್ಲಿ ದಂಪತಿಯನ್ನು ನಿಂದಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದೆ. ಈ ವಿಡಿಯೋ ಠಾಕೂರ್​ಗಂಜ್​​ನ ಸತ್ಖಂಂಡ ಪ್ರದೇಶಕ್ಕೆ ಸೇರಿದ್ದು ಎನ್ನಲಾಗಿದೆ.

ಕಾರಿನಲ್ಲಿ ತೆರಳುತ್ತಿದ್ದ ಬಿಜೆಪಿ ಮುಖಂಡ ಮಹಿಳೆ ಹಾಗೂ ಪತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಎದುರಾಗಿದೆ. ವಿಡಿಯೋ ಮಾಡುತ್ತಿರುವ ವ್ಯಕ್ತಿಯು ಹೆಸರು ಕೇಳಿದಾಗ ಆತ ನಾನು ನಿಮ್ಮಪ್ಪ ಎಂದು ಉದ್ಧಟತನದ ಉತ್ತರ ನೀಡುತ್ತಿರೋದನ್ನ ಕೇಳಬಹುದಾಗಿದೆ. ಈ ವಾದ ವಿವಾದದ ನಡುವೆಯೇ ಮಹಿಳೆಯು ಬಿಜೆಪಿ ಮುಖಂಡನ ಕೆನ್ನೆಗೆ ಬಾರಿಸಿದ್ದಾರೆ.

ವಾಹನ ನಿಲುಗಡೆ ವಿಚಾರವಾಗಿ ಈ ವಾಗ್ವಾದ ಆರಂಭವಾಗಿತ್ತು ಎನ್ನಲಾಗಿದೆ. ವಾಹನದ ವಿಚಾರವಾಗಿ ಬಿಜೆಪಿ ಧ್ವಜವನ್ನು ತೋರಿಸಿ ಬಿಜೆಪಿ ಮುಖಂಡ ಹಾಗೂ ಮಾಜಿ ಕೌನ್ಸಿಲರ್​​ ಅತುಲ್ ದೀಕ್ಷಿತ್​​ ಅದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಅತುಲ್​ ದೀಕ್ಷಿತ್​ ಕುಡಿತ ಅಮಲಿನಲ್ಲಿ ಉದ್ಧಟತನದಿಂದ ವರ್ತಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದಾದ ಬಳಿಕ ಅಲ್ಲಿದ್ದ ಮಹಿಳೆಯು ಬಿಜೆಪಿ ಮುಖಂಡ ಅತುಲ್​ ದೀಕ್ಷಿತ್​ರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಬಿಜೆಪಿ ಮುಖಂಡನಿಗೆ ಕಪಾಳ ಮೋಕ್ಷ ಮಾಡಿದ ಮಹಿಳೆಯು ಈ ಸಂಪೂರ್ಣ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯ ಪತ್ನಿ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read