ವಿಮಾನದಲ್ಲಿ ಮಹಿಳೆಗೆ ಅನಾರೋಗ್ಯ : ತುರ್ತು ಚಿಕಿತ್ಸೆ ನೀಡಿ ರಕ್ಷಿಸಿದ ಮಾಜಿ ಸಚಿವ ಸುರೇಶ್ ಕುಮಾರ್ ಪುತ್ರಿ

ಬೆಂಗಳೂರು : ಮಾಜಿ ಸಚಿವ ಸುರೇಶ್ ಕುಮಾರ್ ಪುತ್ರಿ  ಮಾಡಿರುವ ಕೆಲಸವೊಂದು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಗ್ಗೆ ಸ್ವತಹ ಮಾಜಿ ಸಚಿವ ಸುರೇಶ್ ಕುಮಾರ್ ಅವರೇ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಮಾನದಲ್ಲಿ ಅನಾರೋಗ್ಯಕ್ಕೊಳಗಾಗಿದ್ದ 50 ವರ್ಷದ ಮಹಿಳೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಪುತ್ರಿ ಹಾಗೂ ವೈದ್ಯೆಯಾಗಿರುವ ಡಾ.ದಿಶಾ ಎಸ್ ಕುಮಾರ್ ತುರ್ತು ಚಿಕಿತ್ಸೆ ನೀಡಿ ಮಹಿಳೆಯ ಪ್ರಾಣ ಕಾಪಾಡಿದ್ದಾರೆ. ಈ ಬಗ್ಗೆ ಸುರೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಏನಿದು ಘಟನೆ

‘’ಕಳೆದ ಶನಿವಾರ ನನ್ನ ವೈದ್ಯೆ ಪುತ್ರಿ Dr Disha S Kumar ಅವಳ ಇನ್ನಿಬ್ಬರು ವೈದ್ಯೆ ಸ್ನೇಹಿತೆಯರೊಂದಿಗೆ ಹೈದರಾಬಾದಿಗೆ ರಾತ್ರಿ 11 ಗಂಟೆಯ INDIGO ವಿಮಾನದಲ್ಲಿ ಹೊರಟಿದ್ದಳು. ಅವರ ಸಹಪಾಠಿಯ ಮದುವೆಗಾಗಿ.
ವಿಮಾನ ಮೇಲೇರಿ ಸ್ವಲ್ಪ ಹೊತ್ತಿಗೆ ವಿಮಾನದಲ್ಲಿ Medical Emergency ಘೋಷಿಸಲಾಯಿತು.ಸುಮಾರು 50 ವರ್ಷ ವಯಸ್ಸಿನ ಮಹಿಳೆಯೊಬ್ಬರ ಆರೋಗ್ಯ ತೀರಾ ಆತಂಕ ಸ್ಥಿತಿ ತಲುಪಿತ್ತು.

ತಕ್ಷಣ ಜಾಗೃತರಾಗಿ ಸನ್ನದ್ಧರಾದ ಈ ಮೂವರು ಯುವ ವೈದ್ಯೆಯರು ಇರುವ ವ್ಯವಸ್ಥೆಯಲ್ಲಿಯೇ ಆ ಮಹಿಳೆಗೆ ಅಗತ್ಯ ಚಿಕಿತ್ಸೆ ನೀಡಿ ಸುಧಾರಿಸಿ ಕೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾಗಿ ಸಮಾಧಾನದ ನಗೆ ಬೀರಿದರು’’ ಎಂದು ಸುರೇಶ್ ಕುಮಾರ್ ಪೋಸ್ಟ್ ಮಾಡಿದ್ದಾರೆ.

 

 

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read