ನಿರ್ಭೀತಿಯಿಂದ ಪ್ಯಾರಾಗ್ಲೈಡಿಂಗ್ ಮಾಡಿದ 80ರ ವೃದ್ಧೆ: ಹುಬ್ಬೇರಿಸುತ್ತಿರುವ ನೆಟ್ಟಿಗರು

ಸುಮಾರು 80 ವರ್ಷ ವಯಸ್ಸಿನ ಮಹಿಳೆಯೊಬ್ಬರು ಪ್ಯಾರಾಗ್ಲೈಡಿಂಗ್ ಮಾಡುವ ವಿಡಿಯೋ ಒಂದು ವೈರಲ್​ ಆಗಿದ್ದು, ಎಲ್ಲರೂ ಹುಬ್ಬೇರಿಸುವಂತಾಗಿದೆ. ಈ ವಿಡಿಯೋವನ್ನು ಆಕೆಯ ಮೊಮ್ಮಗಳು ಹಂಚಿಕೊಂಡಿದ್ದಾರೆ. ಏಳು ವರ್ಷಗಳ ಹಿಂದೆ ತನ್ನ ಅಜ್ಜಿ ನಿಧನರಾದರು ಎಂದು ತಿಳಿಸಿದ ಸೆಲಿನಾ ಮೋಸೆಸ್ ಎಂಬ ಬಳಕೆದಾರರು ತಮ್ಮ ಅಜ್ಜಿ ಎಷ್ಟು ಉತ್ಸಾಹದಲ್ಲಿ ಇದ್ದರು ಎಂಬ ಬಗ್ಗೆ ವಿವರಿಸಿದ್ದಾರೆ.

ಈಗ ವೈರಲ್ ಆಗಿರುವ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. ಈ ಕಿರು ವಿಡಿಯೋದಲ್ಲಿ ಸೆಲೀನಾ ಅವರ 80 ವರ್ಷದ ಅಜ್ಜಿ ಪ್ಯಾರಾಗ್ಲೈಡಿಂಗ್ ಅನ್ನು ಕಾಣಬಹುದು. ಅವರು ಸಂಪೂರ್ಣವಾಗಿ ನಿರ್ಭೀತಳಾಗಿದ್ದರು ಮತ್ತು ಸಾಹಸ ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸಿರುವುದನ್ನು ನೋಡಬಹುದು.

ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಈ ವೃದ್ಧೆ ಸಾಬೀತುಪಡಿಸಿದ್ದಾರೆ. ಮೇಲಾಗಿ, ಪ್ಯಾರಾಗ್ಲೈಡಿಂಗ್ ಮಾಡುವಾಗ ಇವರು ಸೀರೆಯನ್ನು ಧರಿಸಿದ್ದರು. ಇದನ್ನು ನೋಡಿ ಜನರು ಅಚ್ಚರಿ ಪಡುತ್ತಿದ್ದಾರೆ. ನಿಜಕ್ಕೂ ವಯಸ್ಸು ಎನ್ನುವುದು ಕೇವಲ ದೇಹಕ್ಕೆ ಮಾತ್ರ ಮನಸ್ಸಿಗೆ ಅಲ್ಲ ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ.

https://youtu.be/j6VqDZJzs2M

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read