ಬಟ್ಟೆ ಹರಿದುಕೊಂಡು ಪುರುಷನ ಜೊತೆ ಜಗಳಕ್ಕಿಳಿದ ಮಹಿಳೆ; ಶಾಕಿಂಗ್ ವಿಡಿಯೋ ವೈರಲ್

ಮಧ್ಯವಯಸ್ಕ ಮಹಿಳೆ ಮತ್ತು ಪುರುಷನ ನಡುವೆ ತೀವ್ರ ಜಗಳ ನಡೆಯುತ್ತಿರುವ ವಿಚಿತ್ರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ, ಇಬ್ಬರು ಜಗಳವಾಡ್ತಿರೋದನ್ನು ಕಾಣಬಹುದು.  ವೈರಲ್‌ ವಿಡಿಯೋದಲ್ಲಿ ಮಹಿಳೆ‌, ಪುರುಷನ ಮೇಲೆ ಕೋಪಗೊಳ್ಳುತ್ತಾಳೆ. ತನ್ನ ಬಟ್ಟೆಗಳನ್ನು ಸಹ ಹರಿದು ಹಾಕುತ್ತಿದ್ದಾಳೆ.

ಹಿಮಾಲಯನ್ ಹಿಂದೂ ಎಂಬ ಬಳಕೆದಾರ ಈ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಜಾಗದ ವಿಷ್ಯಕ್ಕೆ ಇವರಿಬ್ಬರ ಮಧ್ಯೆ ಜಗಳ ನಡೆದಂತಿದೆ. ಸಣ್ಣ ಇಟ್ಟಿಗೆ ಗೋಡೆಯನ್ನು ಒಡೆಯುವ ಮೊದಲು ರಾಡ್  ತೆಗೆಯುತ್ತಾಳೆ. ಅದನ್ನು ಪುರುಷ ವಿಡಿಯೋ ಮಾಡಿದ್ದಾನೆ. ಸ್ವಲ್ಪ ಸಮಯದ ನಂತರ, ಮಹಿಳೆ ತನ್ನ ಕೃತ್ಯವನ್ನು ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಗೆ ಅದೇ ಕೋಲಿನಿಂದ ಹೊಡೆಯುವ ಬೆದರಿಕೆ ಹಾಕ್ತಾಳೆ. ನಂತ್ರ ತನ್ನ ಬಟ್ಟೆಯನ್ನು ತಾನೇ ಹರಿಯುತ್ತ ಮುಂದೆ ಬರೋದನ್ನು ನೋಡ್ಬಹುದು.

ಈ ವಿಡಿಯೋ ಎಲ್ಲಿಯದ್ದು ಎಂಬುದು ತಿಳಿದಿಲ್ಲ. ಆದ್ರೆ ವಿಡಿಯೋಕ್ಕೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯ ಬಳಕೆದಾರರು ಮಹಿಳೆ  ಬಟ್ಟೆ ಹರಿಯೋದನ್ನು ವಿರೋಧಿಸಿದ್ದಾರೆ. ಅನೇಕರು ಸುಳ್ಳು ಆರೋಪ ಮಾಡುವ ಕಾರಣ, ಯಾವುದೇ ಜಗಳ ನಡೆದ್ರೂ ಅದನ್ನು ರೆಕಾರ್ಡ್‌ ಮಾಡೋದು ಬೆಸ್ಟ್‌ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read