ನದಿಯಲ್ಲಿ ಕಳೆದು ಹೋಗಿದ್ದ ಕ್ಯಾಮೆರಾ;13 ವರ್ಷಗಳ ಬಳಿಕ ಮರಳಿ ಪಡೆದ ಮಹಿಳೆ….!

ಮೆಚ್ಚಿನ ಕ್ಷಣಗಳ ಫೋಟೋಗಳನ್ನು ಸೆರೆ ಹಿಡಿಯುವಾಗ ನಮಗೆ ಉಂಟಾಗಬಲ್ಲ ಅತಿ ದೊಡ್ಡ ಭಯವೆಂದರೆ, ಅಪ್ಪಿತಪ್ಪಿ ಕ್ಯಾಮೆರಾ ಬಿದ್ದು ಹಾಳಾಗಿಬಿಟ್ಟೀತೆಂಬುದು.

ಕೋರಲ್ ಅಮಾಯಿಗೆ ಈ ಭಯವೇ ನಿಜವಾಗಿಬಿಟ್ಟಿತ್ತು. 13 ವರ್ಷಗಳ ಹಿಂದೆ ಕೊಲರಾಡೋದ ಅನಿಮಾಸ್‌ ನದಿಯಲ್ಲಿ ತಮ್ಮ ಕ್ಯಾಮೆರಾ ಕಳೆದುಕೊಂಡಿದ್ದರು ಕೋರಲ್. ಟ್ಯೂಬಿಂಗ್ ಮಾಡುತ್ತಿದ್ದ ವೇಳೆ ಇವರ ವಾಟರ್‌ಪ್ರೂಫ್ ಕ್ಯಾಮೆರಾ ಹೀಗೆ ನದಿಗೆ ಬಿದ್ದುಬಿಟ್ಟಿದೆ. ಕ್ಯಾಮೆರಾಗೆ ಅಂಟಿಸಿದ್ದ ಕೇವಲ್ ಹಾಗೂ ಫ್ಲೊಟೇಶನ್ ಸಾಧನಗಳೂ ಹಾಳಾದ ಕಾರಣ ಕ್ಯಾಮೆರಾ ಮತ್ತೆ ಸಿಕ್ಕಿರಲಿಲ್ಲ.

ಆದರೆ ಅದೇ ಜಾಗದಲ್ಲಿ ಓಡಾಡುತ್ತಿದ್ದ ವೇಳೇ ಯಾರೋ ಒಬ್ಬ ವ್ಯಕ್ತಿಗೆ ಈ ಕ್ಯಾಮೆರಾ ಸಿಕ್ಕಿದೆ. ಜೊತೆಗೆ ಅದರಲ್ಲಿದ್ದ ಎಸ್‌ಡಿ ಕಾರ್ಡ್ ಹಾಗೂ ಫೋಟೋಗಳನ್ನೂ ಸಹ ಅವರು ರಿಕವರ್‌ ಮಾಡಿದ್ದಾರೆ. ಫೇಸ್ಬುಕ್‌ನಲ್ಲಿ ಡುರಾಂಗೋ ಆನ್ಲೈನ್ ಗ್ಯಾರೇಜ್ ಶಾಪ್‌ನ ಪೇಜ್‌ನಲ್ಲಿ ತಮಗೆ ಸಿಕ್ಕ ಫೋಟೋ ಹಾಗೂ ಅದರಲ್ಲಿದ್ದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ ಇವರು.

ಕೋರಲ್‌ ಹಾಗೂ ಆಕೆಯ ಬಾಯ್‌ಫ್ರೆಂಡ್ ಇದೇ ಡುರಾಂಗೋ ಪ್ರದೇಶದಲ್ಲಿ ಬೆಳೆದ ಕಾರಣ ಅವರನ್ನು ಬಲ್ಲವರು ದೊಡ್ಡ ಸಂಖ್ಯೆಯಲ್ಲಿ ಅವರಿಬ್ಬರ ಹೆಸರನ್ನು ಟ್ಯಾಗ್ ಮಾಡಿದ್ದರು. ಆಕೆಯ ಸ್ನೇಹಿತನೊಬ್ಬನಿಗೆ ಕೋರಲ್ ಕ್ಯಾಮೆರಾ ಕಳೆದುಕೊಂಡ ಘಟನೆ ನೆನಪಾಗಿದ್ದಲ್ಲದೇ, ಅದರಲ್ಲಿದ್ದ ಫೋಟೋವೊಂದರಲ್ಲಿ ಇರುವುದು ಕೋರಲ್ ಎಂದು ಗುರುತು ಹಿಡಿದಿದ್ದಾರೆ.

ಕಳೆದ 13 ವರ್ಷಗಳಿಂದ ಈ ಕ್ಯಾಮೆರಾ ನೀರಿನಲ್ಲಿ 1.2 ಮೈಲಿ ದೂರಕ್ಕೆ ತೆರಳಿದೆ ಎಂದು ಕೋರಲ್ ಫಾಕ್ಸ್ ನ್ಯೂಸ್‌ಗೆ ಕೊಟ್ಟ ಸಂದರ್ಶನದಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read