ಸಾಮಾಜಿಕ ಜಾಲತಾಣಗಳಲ್ಲಿ ಅನುಯಾಯಿಗಳ ಲೈಕ್ಸ್, ಕಮೆಂಟ್ ಗಿಟ್ಟಿಸಿಕೊಳ್ಳಲು ಕೆಲವರು ಅತಿರೇಕದ ಸಾಹಸ ಮಾಡಲು ಮುಂದಾಗುತ್ತಾರೆ. ಇದಕ್ಕಾಗಿ ಸಾವಿನ ಬಾಗಿಲ ಕದವನ್ನೂ ತಟ್ಟುತ್ತಾರೆ. ಅಂತದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚೀನಾದ ಯುವತಿ, ಶ್ರೀಲಂಕಾಕ್ಕೆ ಭೇಟಿ ನೀಡಿದ ವೇಳೆ ಚಲಿಸುವ ರೈಲಿನಲ್ಲಿ ಸಾಹಸ ಮಾಡಲು ಹೋಗಿದ್ದಾಳೆ. ಈ ಸಂದರ್ಭದಲ್ಲಿ ಅಚಾನಕ್ ಆಗಿ ಅಪಾಯ ಎದುರಾಗಿದ್ದು, ಇದನ್ನು ನೋಡಿ ವಿಡಿಯೋ ಸೆರೆ ಮಾಡುತ್ತಿರುವುದನ್ನು ನೋಡಿದವರು ಗಾಬರಿಗೊಂಡಿದ್ದಾರೆ.
ಚೀನಾದ ಯುವತಿ ಶ್ರೀಲಂಕಾಕ್ಕೆ ಭೇಟಿ ನೀಡಿದಾಗ ಸೆಲ್ಫಿ ಸೆರೆಹಿಡಿಯುತ್ತಿದ್ದಾಗ ಚಲಿಸುತ್ತಿರುವ ರೈಲಿನಿಂದ ಬಾಗಿ ವಿಡಿಯೋ ಮಾಡುತ್ತಿದ್ದಳು. ಆಕೆ ವಿಡಿಯೋ ಮಾಡುತ್ತಿರುವುದನ್ನು ಸಹ ಪ್ರಯಾಣಿಕರು ಗಮನಿಸುತ್ತಿದ್ದರು.
ಆಗ ಇದ್ದಕ್ಕಿದ್ದಂತೆ ಪೊದೆ ಎದುರಾಗಿದ್ದು, ಅದು ತಗುಲಿ ಆಕೆ ಕೆಳಗೆ ಬಿದ್ದಿದ್ದಾಳೆ. ಹಠಾತ್ ನಡೆದ ಘಟನೆಯಿಂದ ಸಹ ಪ್ರಯಾಣಿಕರು ಗಾಬರಿಗೊಂಡಿದ್ದಾರೆ.
ʼಡೈಲಿಸ್ಟಾರ್ʼ ವರದಿಯ ಪ್ರಕಾರ, ರೈಲು ಮುಂದಿನ ನಿಲ್ದಾಣದಲ್ಲಿ ನಿಂತಿದ್ದು, ಯುವತಿಗೆ ಸಹಾಯ ಮಾಡಲು ಕೆಲವು ಸಹ ಪ್ರಯಾಣಿಕರು ಅಪಘಾತದ ಸ್ಥಳಕ್ಕೆ ಧಾವಿಸಿದ್ದರು. ಅದೃಷ್ಟವಶಾತ್, ರೈಲಿನಿಂದ ಹೊರಗೆ ಬಿದ್ದ ನಂತರ ಯುವತಿ ಪೊದೆಗಳ ಮೇಲೆ ಬಿದ್ದಿದ್ದರಿಂದ ಯಾವುದೇ ಗಂಭೀರ ಗಾಯಗಳಾಗಿಲ್ಲ.
ಭಯಾನಕ ಕ್ಷಣವನ್ನು ತೋರಿಸುವ ವೀಡಿಯೊವನ್ನು Instagram ನಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ, ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.