ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಝೊಮಾಟೊದಲ್ಲಿ ಸಸ್ಯಾಹಾರಿ ಆಹಾರವನ್ನು ಆರ್ಡರ್ ಮಾಡಿದ್ದು ಅವರಿಗೆ ಚಿಕನ್ ಬಂದಿದೆ. ಈ ಬಗ್ಗೆ ಅಸಮಾಧಾನ ಹೊರಹಾಕಿದ ಗ್ರಾಹಕರು ಚಿಕನ್ ಖಾದ್ಯ ವನ್ನು ತೋರಿಸುತ್ತಾ ಟ್ವಿಟರ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ವೀಡಿಯೊದಲ್ಲಿ ಗ್ರಾಹಕರಾದ ನಿರುಪಮಾ ಸಿಂಗ್ ತನ್ನ ಪ್ಲೇಟ್‌ನಲ್ಲಿ ಚಿಕನ್ ಖಾದ್ಯವನ್ನು ತೋರಿಸುತ್ತಾ, ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್‌ನಲ್ಲಿ ‘ವೆಜ್ ಫುಡ್’ ಆರ್ಡರ್ ಮಾಡಿದ್ದೆ. ಆದರೆ ನಮಗೆ ಚಿಕನ್ ಬಂದಿದೆʼ ಎಂದು ಆಹಾರವನ್ನು ಚಮಚದಿಂದ ತೆಗೆದು ತೋರಿಸಿದ್ದಾರೆ.
“ಹಾಯ್ @zomato, ವೆಜ್ ಫುಡ್ ಆರ್ಡರ್ ಮಾಡಿದ್ದೇವೆ . ಆದರೆ ನಾವು ನಾನ್ ವೆಜ್ ಫುಡ್ ಪಡೆದುಕೊಂಡಿದ್ದೇವೆ. ನಮ್ಮಲ್ಲಿ 4/5 ಸಸ್ಯಾಹಾರಿಗಳು. ಇದು ಎಂಥಾ ಸೇವೆ? ಭಯಾನಕ ಅನುಭವ” ಎಂದು ನಿರುಪಮಾ ಸಿಂಗ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಈ ಬಗ್ಗೆ ಝೊಮಾಟೊ ಕ್ಷಮೆಯಾಚಿಸಿದೆ. ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿ, “ನಮಸ್ಕಾರ ನಿರುಪಮಾ, ಈ ಅವಘಡಕ್ಕಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಇದನ್ನು ನಮಗೆ ಹೆಚ್ಚಿನ ತನಿಖೆ ಮಾಡಲು ದಯವಿಟ್ಟು ನಿಮ್ಮ ನೋಂದಾಯಿತ ಫೋನ್ ಸಂಖ್ಯೆಯನ್ನು ಖಾಸಗಿ ಸಂದೇಶದಲ್ಲಿ ಹಂಚಿಕೊಳ್ಳಿ” ಎಂದಿದೆ. ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದ್ದು ಝೊಮಾಟೊ ಸೇವೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
https://twitter.com/nitropumaa/status/1632051504969396225?ref_src=twsrc%5Etfw%7Ctwcamp%5Etweetembed%7Ctwterm%5E1632051504969396225%7Ctwgr%5E6e2d7593fe0a6623e543b2d7f55878dca3238d9d%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwoman-receives-chicken-after-ordering-veg-food-on-zomato-company-responds-3838604