ಜಿಯು-ಜಿಟ್ಸುವಿನಲ್ಲಿ ​ಬ್ಲಾಕ್ ಬೆಲ್ಟ್​: 8 ವರ್ಷಗಳ ಸಾಧನೆಗೆ ಸಂದ ಫಲ; ಭಾವುಕ ಕ್ಷಣಗಳ ವಿಡಿಯೋ ವೈರಲ್

ಜಿಯು-ಜಿಟ್ಸು ಆಟವಾಡುವುದು ಸಾಮಾನ್ಯವಲ್ಲ. ಆದರೆ ಇದರಲ್ಲಿ ಬ್ಲಾಕ್​ ಬೆಲ್ಟ್​ ಸಾಧನೆ ಮಾಡಿ ಎಂಟು ವರ್ಷಗಳ ಕಠಿಣ ಪರಿಶ್ರಮವನ್ನು ಸಾರ್ಥಕಗೊಳಿಸಿದ ಮಹಿಳೆಯೊಬ್ಬರ ಕಥೆ ಶ್ಲಾಘನಾರ್ಹವಾಗಿದೆ.
ಇದರ ವಿಡಿಯೋ ವೈರಲ್​ ಆಗಿದ್ದು, ಲಾರಿ ರೋಚಾ ಎಂಬುವವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ,

“ಈ ಭಾವನೆಯನ್ನು ವಿವರಿಸಲು ಪದಗಳಿಲ್ಲ! ನಾನು ಜಿಯು-ಜಿಟ್ಸುವನ್ನು ಪ್ರಾರಂಭಿಸಿ 8 ವರ್ಷಗಳು ಕಳೆದಿವೆ ಮತ್ತು ಇದು ಬಹುಶಃ ನಾನು ಜೀವನದಲ್ಲಿ ಮಾಡಿದ ಅತ್ಯುತ್ತಮ ಆಯ್ಕೆಯಾಗಿದೆ” ಎಂದಿದ್ದಾರೆ ಲಾರಿ.

ನನ್ನ ಸ್ವಂತ ಅಕಾಡೆಮಿಯನ್ನು ತೆರೆಯುವ ಯೋಜನೆ ರೂಪಿಸಿದ್ದೇನೆ. ನಾನು ಪ್ರಪಂಚದಾದ್ಯಂತ ಸ್ಪರ್ಧಿಸುತ್ತೇನೆ ಮತ್ತು ಅತ್ಯುತ್ತಮ ಅನುಭವಗಳನ್ನು ಹೊಂದಲು ಬಯಸುತ್ತೇನೆ. ನನಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಎಂಟು ವರ್ಷಗಳ ಪ್ರಯತ್ನವೆಂದರೆ ಸುಲಭವಲ್ಲ ಹಗಲು – ಇರುಳು ಇದಕ್ಕಾಗಿ ಶ್ರಮಿಸಿದ್ದೇನೆ. ಕೊನೆಗೂ ನನ್ನ ಆಸೆ ಈಡೇರಿದೆ ಎಂದಿದ್ದಾರೆ.

https://youtu.be/wuWj04Ud9G4

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read