ಕೋಲಾರ: ವಿವಾಹಿತೆ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಲಾಗಿದೆ. ಗರ್ಭಿಣಿಯಾಗಿದ್ದಕ್ಕೆ ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದು, ಪ್ರಿಯಕರ ಅಮರನಾಥ್ ಮನೆಯ ಮುಂದೆ ಮಹಿಳೆ ಧರಣಿ ಕುಳಿತಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ಅಮರನಾಥ್ ಮನೆಯ ಎದುರು ಸಂಯುಕ್ತಾ ಪ್ರತಿಭಟನೆ ನಡೆಸಿದ್ದಾರೆ. ಪತಿ ಹರೀಶ್ ಸ್ನೇಹಿತ ಅಮರನಾಥ್ ನನ್ನು ಸಂಯುಕ್ತಾ ಪ್ರೀತಿಸಿದ್ದರು.
ಬೆಂಗಳೂರಿನಲ್ಲಿ ಇರುವಾಗ ಅಮರನಾಥ್ ಜೊತೆಗೆ ಪ್ರೀತಿ, ಪ್ರೇಮ ಉಂಟಾಗಿತ್ತು. 3 ವರ್ಷದಿಂದ ಪರಸ್ಪರ ಅಮರನಾಥ್ ಮತ್ತು ಸಂಯುಕ್ತಾ ಪ್ರೀತಿಸಿದ್ದರು. ಅಮರನಾಥ್ ಗಾಗಿ ಸಂಯುಕ್ತಾ ಪತಿಯನ್ನು ತೊರೆದು ಬಂದಿದ್ದರು. ಸಂಯುಕ್ತಾ ಐದು ತಿಂಗಳ ಗರ್ಭಿಣಿಯಾದ ಹಿನ್ನೆಲೆ ವಿವಾಹವಾಗಲು ಅಮರನಾಥ್ ನಿರಾಕರಿಸಿದ್ದಾರೆ ಎನ್ನಲಾಗಿದೆ. ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿ ಸಂಯುಕ್ತಾ ಧರಣಿ ಕುಳಿತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.