ಯಮುನಾನಗರ (ಹರಿಯಾಣ): ಹರಿಯಾಣದ ಯಮುನಾ ನಗರದಲ್ಲಿ ಮಹಿಳೆಯೊಬ್ಬಳನ್ನು ಕಾರಿನಿಂದ ಅಪಹರಿಸಿಕೊಂಡು ಹೋಗಲು ಪ್ರಯತ್ನಿಸಿರುವ ಭಯಾನಕ ಘಟನೆ ನಡೆದಿದ್ದು, ಇದರ ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಜಿಮ್ಗೆ ಹೋಗಿ ಮರಳುತ್ತಿದ್ದ ಮಹಿಳೆ ಕಾರಿನೊಳಕ್ಕೆ ಹೋಗುತ್ತಿದ್ದಂತೆಯೇ ಇಬ್ಬರು ಅಪಹರಣಕಾರರು ಆಕೆಯನ್ನು ಕಾರಿನಿಂದ ಎಳೆದೊಯ್ಯಲು ಪ್ರಯತ್ನಿಸಿರುವ ದೃಶ್ಯ ಸೆರೆಯಾಗಿದೆ. ಇನ್ನಿಬ್ಬರು ದೂರದಲ್ಲಿ ನಿಂತುಕೊಂಡು ಗಮನಿಸುತ್ತಿದ್ದಾರೆ.
ಆದರೆ ಕಾರಿನೊಳಕ್ಕೆ ಇವರು ಹೋಗುತ್ತಿದ್ದಂತೆಯೇ ಮಹಿಳೆ ಗಟ್ಟಿಯಾಗಿ ಕಿರುಚಿಕೊಂಡಿದ್ದಾಳೆ. ದಾರಿಹೋಕರು ನೋಡುತ್ತಾರೆ ಎನ್ನುವ ಭಯದಿಂದ ಅಪಹರಣಕಾರರು ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾರೆ.
ನಂತರ ಮಹಿಳೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲು ಮಾಡಿದ್ದಾರೆ. ಸಿಸಿಟಿವಿಯನ್ನು ಆಧರಿಸಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದರು. ಓರ್ವ ಆರೋಪಿ ಸೆರೆ ಸಿಕ್ಕಿದ್ದು, ಉಳಿದವರಿಗೆ ಶೋಧ ಕಾರ್ಯ ನಡೆದಿದೆ ಎಂದು ಯಮುನಾನಗರ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ಪಿ) ತಿಳಿಸಿದ್ದಾರೆ.
https://twitter.com/ANI/status/1609414359557754883?ref_src=twsrc%5Etfw%7Ctwcamp%5Etweetembed%7Ctwterm%5E1609414359557754883%7Ctwgr%5E259fb3eefdc1dc5bcc565a27c952a8bf7e54219e%7Ctwcon%5Es1_&ref_url=https%3A%2F%2Fwww.ndtv.com%2Findia-news%2Fcaught-on-camera-4-men-try-to-kidnap-woman-in-haryanas-yamunanagar-probe-underway-one-held-3654764