ತನ್ನ ಮಗನನ್ನೇ ಮದುವೆಯಾದ 52ರ ಮಹಿಳೆ…..!

ಸಂತಾನವಿಲ್ಲದ ಅನೇಕರು ಮಕ್ಕಳನ್ನು ದತ್ತು ಪಡೆದು ಅವರನ್ನು ಸಾಕುತ್ತಾರೆ. ಮತ್ತೆ ಕೆಲವರಿಗೆ ಮಕ್ಕಳಿದ್ರೂ ಅನಾಥಾಶ್ರಮದಿಂದ ಅಥವಾ ದಾರಿಯಲ್ಲಿ ಅನಾಥವಾಗಿ ಬಿದ್ದಿದ್ದ ಮಕ್ಕಳನ್ನು ಸಾಕುವ ತಾಳ್ಮೆ, ಮಮತೆ, ಪ್ರೀತಿಯಿರುತ್ತದೆ. ಅನೇಕರು ಈ ಕೆಲಸ ಮಾಡಿದ್ದನ್ನು ನೀವು ಕೇಳಿರ್ತೀರಿ. ಅನಾಥಾಶ್ರಮವಿರಲಿ ಇಲ್ಲ ದಾರಿಯಲ್ಲಿ ಸಿಕ್ಕಿರಲಿ, ಮಗುವನ್ನು ದತ್ತು ಪಡೆದ್ಮೇಲೆ ಅದು ನಮ್ಮದೇ ಮಗುವಾಗುತ್ತದೆ. ದತ್ತು ಪಡೆದವರು ತಂದೆ – ತಾಯಿ ಸ್ಥಾನದಲ್ಲಿ ನಿಲುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಅನಾಥಾಶ್ರಮದಿಂದ ದತ್ತು ಪಡೆದ ಹುಡುಗನನ್ನು ಮದುವೆಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಬಾಯಿಗೆ ಆಹಾರವಾಗಿದ್ದಾಳೆ.

ರಷ್ಯಾದ ಮಹಿಳೆಗೆ 53 ವರ್ಷ ವಯಸ್ಸು. ಆಕೆ ದತ್ತು ಪಡೆದ ಮಗನ ವಯಸ್ಸು 22 ವರ್ಷ. ಇಬ್ಬರ ನಡುವಿನ 31 ವರ್ಷ ವಯಸ್ಸಿನ ಅಂತರವಿದೆ. ಈ ಮಹಿಳೆ ಹೆಸರು ಐಸಿಲು. ಟಾಟರ್ಸ್ತಾನ್‌ ನ ಪ್ರಸಿದ್ಧ ಸಂಗೀತಗಾರ್ತಿ. 8 ವರ್ಷಗಳ ಹಿಂದೆ ಸಂಗೀತ ಕಲಿಸಲು ಅನಾಥಾಶ್ರಮಕ್ಕೆ ಹೋಗಿದ್ದಳು. ಅಲ್ಲಿ ಐಸಿಲು 13 ವರ್ಷದ ಹುಡುಗ ಡೇನಿಯಲ್ ಅನ್ನು ಭೇಟಿಯಾಗಿದ್ದಾಳೆ.

ಹುಡುಗನಿಗೆ ಸಂಗೀತ ಕಲಿಯುವ ಆಸೆಯಿದೆ ಎಂದು ತಿಳಿದುಕೊಂಡ ಐಸಿಲು ಆತನಿಗೆ ಸಂಗೀತ ಕಲಿಸಲು ಪ್ರಾರಂಭಿಸಿದ್ದಾಳೆ. ಅವನಿಗೆ 14 ವರ್ಷವಾದಾಗ ಐಸಿಲು ಅವನನ್ನು ದತ್ತು ಪಡೆದಿದ್ದಾಳೆ. ನಂತರ ಇಬ್ಬರೂ ಒಟ್ಟಿಗೆ ವಾಸಿಸಲು ಶುರು ಮಾಡಿದ್ದಾರೆ.

ಐಸಿಲು, ಹುಡುಗನನ್ನು ದತ್ತು ತೆಗೆದುಕೊಂಡಾಗಲೇ ಜನರು ನಾನಾ ಮಾತನಾಡ್ತಿದ್ದರಂತೆ. ಅದಕ್ಕಾಗಿಯೇ ನಾನು ಆತನನ್ನು ಮದುವೆ ಆಗಿದ್ದೇನೆ ಎನ್ನುತ್ತಾಳೆ ಐಸಿಲು. ಇದೊಂದು ಆಧ್ಯಾತ್ಮಿಕ ಮದುವೆ. ಈ ಮದುವೆಗೆ ಅರ್ಥವಿಲ್ಲ. ಇದು ದೈಹಿಕ ವಿವಾಹವಲ್ಲ ಎಂದು ನೆಟ್ಟಿಗರಿಗೆ ಐಸಿಲು ಉತ್ತರ ನೀಡಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read