ಹೈಡ್ ಅಂಡ್ ಸೀಕ್ ಆಡಲು ಹೋಗಿ ಪ್ರಿಯಕರನ ಪ್ರಾಣಕ್ಕೇ ಕುತ್ತು ತಂದ ಯುವತಿ; 2 ವರ್ಷಗಳ ಬಳಿಕ ಕೋರ್ಟ್ ಸಮನ್ಸ್

ಯುವತಿಯೊಬ್ಬಳ ಹುಡುಗಾಟ ಆಕೆಯ ಪ್ರಿಯಕರನ ಪ್ರಾಣಕ್ಕೇ ಕುತ್ತು ತಂದಿದೆ. 2020ರಲ್ಲಿ ಫ್ಲೋರಿಡಾದ ವಿಂಟರ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದ್ದು, ಇದೀಗ ನ್ಯಾಯಾಲಯ ಯುವತಿಗೆ ಸಮನ್ಸ್ ನೀಡಿದೆ. ತನ್ನ ಪ್ರಿಯಕರ ಸಂಕಷ್ಟದಲ್ಲಿದ್ದರೂ ಸಹ ನೆರವಿಗೆ ಧಾವಿಸದೆ ನಿರ್ಲಕ್ಷ್ಯ ವಹಿಸಿದ ಆರೋಪ ಹೊರಿಸಲಾಗಿದೆ.

ಘಟನೆಯ ವಿವರ: 2020ರ ಫೆಬ್ರವರಿಯಲ್ಲಿ ಸಾರಾ ಬೂನ್ ಹಾಗೂ ಜಾರ್ಜ್ ಟೋರ್ಸ್ ಎಂಬ ಈ ಜೋಡಿ ಮನೆಯಲ್ಲಿ ಮದ್ಯ ಸೇವಿಸಿದೆ. ಬಳಿಕ ಸಮಯ ಕಳೆಯಲು ಹೈಡ್ ಅಂಡ್ ಸೀಕ್ ಆಡಲು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ಜಾರ್ಜ್ ಸೂಟ್ಕೇಸ್ ನಲ್ಲಿ ಅಡಗಿಕೊಂಡಿದ್ದು, ಆತನಿಗೆ ಉಸಿರು ಕಟ್ಟಲು ಆರಂಭವಾಗಿದೆ.

ಹೀಗಾಗಿ ತನ್ನ ಪ್ರಿಯತಮೆ ಸಾರಾಗೆ ನನಗೆ ಒಳಗಿರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾನೆ. ಆದರೆ ಕುಡಿದ ಮತ್ತಿನಲ್ಲಿದ್ದ ಯುವತಿ ಆತ ತಮಾಷೆ ಮಾಡುತ್ತಿದ್ದಾನೆ ಎಂದು ಭಾವಿಸಿದ್ದಾಳೆ. ಅಲ್ಲದೆ ನನಗೆ ಸುಸ್ತಾಗಿದೆ ಎಂದು ಕೋಣೆಗೆ ಹೋಗಿ ಮಲಗಿದ್ದಾಳೆ. ಬೆಳಗ್ಗೆ ಎದ್ದು ನೋಡಿದಾಗ ಜಾರ್ಜ್ ಪಕ್ಕದಲ್ಲಿ ಇಲ್ಲದೆ ಇರುವುದು ಗಮನಕ್ಕೆ ಬಂದಿದೆ.

ಕೂಡಲೇ ಸೂಟ್ಕೇಸ್ ಜಿಪ್ ತೆಗೆದು ನೋಡಿದರೆ ಜಾರ್ಜ್ ಉಸಿರಾಡದೆ ಇರುವುದು ಗೊತ್ತಾಗಿದೆ. ಕೂಡಲೇ ಪೊಲೀಸ್ ತುರ್ತು ಸಹಾಯವಾಣಿ 911 ಕ್ಕೆ ಕರೆ ಮಾಡಿ ಎಲ್ಲ ವಿಷಯವನ್ನು ತಿಳಿಸಿದ್ದಾಳೆ. ಅವರು ಬಂದು ನೋಡಿದಾಗ ಜಾರ್ಜ್ ಮೃತಪಟ್ಟಿರುವುದು ಗೊತ್ತಾಗಿದೆ. ಇದೀಗ ಸಾರಾಗಿ ನ್ಯಾಯಾಲಯ ಸಮನ್ಸ್ ನೀಡಿದ್ದು ಜನವರಿ 30ರಂದು ವಿಚಾರಣೆ ನಡೆಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read