ಮೃತ ಶರೀರದ ದೇಹದ ಭಾಗ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾಕೆ ಅರೆಸ್ಟ್​…!

ನ್ಯೂಯಾರ್ಕ್​: ಅಮೆರಿಕದ ಅರ್ಕಾನ್ಸಾಸ್ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಂಡೇಸ್ ಚಾಪ್‌ಮನ್ ಸ್ಕಾಟ್ ಎಂಬ ಮಹಿಳೆ ಫೇಸ್‌ಬುಕ್‌ನಲ್ಲಿ ಶವಗಳ ದೇಹದ ಭಾಗಗಳನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿ ಅಕ್ರಮ ವ್ಯಾಪಾರದಿಂದ ಸುಮಾರು $10,975 (ಅಂದಾಜು ರೂ. 8.9 ಲಕ್ಷ) ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ಕಾಟ್‌ನ ನಿವಾಸಿಯಾಗಿರುವ ಈಕೆ, ಅವಶೇಷಗಳನ್ನು ಸಾಗಿಸುವುದು, ದಹನ ಮಾಡುವುದು ಮತ್ತು ಇತರ ಕಾರ್ಯಗಳು ಸೇರಿವೆ. ವರದಿಗಳ ಪ್ರಕಾರ, ಸ್ಕಾಟ್, ವೈದ್ಯಕೀಯ ಅಧ್ಯಯನಕ್ಕಾಗಿ ಬಳಸಲಾದ ಶವಗಳಿಂದ ದೇಹದ ಭಾಗಗಳನ್ನು ಕದ್ದು ಅವುಗಳನ್ನು ಜೆರೆಮಿ ಲೀ ಗೆ ಮಾರಾಟ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

ಫೆಡರಲ್ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣೆಯ ಆರೋಪ ಪಟ್ಟಿಯಲ್ಲಿ 20 ಬಾಕ್ಸ್ ದೇಹದ ಭಾಗಗಳನ್ನು ಮಾರಾಟ ಮಾಡಿದ ಆರೋಪವನ್ನು ಬಹಿರಂಗಪಡಿಸಿದೆ. ಸ್ಕಾಟ್ ಫೇಸ್‌ಬುಕ್‌ನಲ್ಲಿ ಖರೀದಿದಾರರೊಂದಿಗೆ ಸಂವಾದ ನಡೆಸಿ ಅದನ್ನು ಮಾರಾಟ ಮಾಡುತ್ತಿದ್ದಳು. 2 ಮೆದುಳುಗಳು, 3 ಹೃದಯಗಳು, 1 ಶ್ವಾಸಕೋಶ ಸೇರಿದಂತೆ ಹಲವಾರು ಭಾಗಗಳನ್ನು ಮಾರಿದ್ದಾಳೆ. ಈಕೆಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read