ಟಿಕ್‌ಟಾಕ್‌ನಲ್ಲಿ ವೈರಲ್ ಆದ ಖಾದ್ಯ ತಯಾರಿಸಲು ಹೋಗಿ ಮುಖ ಸುಟ್ಟುಕೊಂಡ ಮಹಿಳೆ

ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದ್ದ ವಿಡಿಯೋವೊಂದನ್ನು ನೋಡಿಕೊಂಡು ಮೊಟ್ಟೆಯನ್ನು ಬೇಯಿಸಲು ಮುಂದಾದ ಮಹಿಳೆಯೊಬ್ಬರು ತಮ್ಮ ಮುಖ ಸುಟ್ಟುಕೊಂಡಿದ್ದಾರೆ.

ಶಾಫಿಯಾ ಬಾಶೀರ್‌, 37, ಮೊಟ್ಟೆಯನ್ನು ಬೇಯಿಸಿಕೊಳ್ಳಲು ಮುಂದಾದ ವೇಳೆ ಈ ಆನಾಹುತ ಸಂಭವಿಸಿದೆ. ಟ್ರೆಂಡ್‌ಗಳನ್ನು ಫಾಲೋ ಮಾಡಿ ತಾವು ಪಡುತ್ತಿರುವ ಪಾಡನ್ನು ಅನುಭವಿಸಬೇಡಿ ಎಂದು ಬಾಶೀರ್‌ ಎಲ್ಲರನ್ನೂ ವಿನಂತಿಸಿಕೊಳ್ಳುತ್ತಿದ್ದಾರೆ.

ಕುದಿಯುವ ನೀರಿದ್ದ ಮಗ್‌ನಲ್ಲಿ ಮೊಟ್ಟೆಗಳನ್ನು ಹಾಕಿದ ಈಕೆ ಬಳಿಕ ಅವುಗಳನ್ನು ಎರಡು ನಿಮಿಷಗಳ ಮಟ್ಟಿಗೆ ಮೈಕ್ರೋವೇವ್‌ನಲ್ಲಿ ಇರಿಸಿದ್ದಾರೆ. ಇದಾದ ಬಳಿಕ ಮೊಟ್ಟೆಯ ಮೇಲೆ ತಣ್ಣಗಿನ ಚಮಚವೊಂದನ್ನು ಮೊಟ್ಟೆಯ ಮೇಲಿಡುತ್ತಲೇ ಮೊಟ್ಟೆ ಒಡೆದು ಕಾರಂಜಿಯ ರೀತಿ ಚಿಮ್ಮಿ ಆಕೆಯ ಮುಖದ ಬಲಭಾಗದಲ್ಲಿ ಮೆತ್ತಿಕೊಂಡಿದೆ.

ಕೂಡಲೇ ತನ್ನ ಮುಖವನ್ನು ತಣ್ಣನೆಯ ನೀರಿಗೆ ಕೊಟ್ಟುಕೊಂಡ ಈಕೆ ಆಸ್ಪತ್ರೆಗೆ ತೆರಳಿದ್ದಾರೆ. 12 ಗಂಟೆಗಳ ಕಾಲ ಉರಿ ಕಡಿಮೆಯಾಗಿದೆ. ಅದೃಷ್ಟವಶಾತ್‌ ಆಕೆಯ ಮುಖದ ಮೇಲೆ ಯಾವುದೇ ಕಲೆಗಳು ಸೃಷ್ಟಿಯಾಗಿಲ್ಲ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read