ಭೀಕರ ಅಪಘಾತದಿಂದ ಮಹಿಳೆ ಸ್ಥಳದಲ್ಲೇ ಸಾವು ; ಕಾರು ಡಿಕ್ಕಿಯಾದ ರಭಸಕ್ಕೆ ಗಾಳಿಯಲ್ಲಿ ಹಾರಿದ ಆಘಾತಕಾರಿ ದೃಶ್ಯ ಸೆರೆ | Shocking Video

ಚಿತ್ರದುರ್ಗದಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಎಕ್ಸ್‌ಪ್ರೆಸ್‌ವೇ ದಾಟುತ್ತಿದ್ದಾಗ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವರು ಗಾಳಿಯಲ್ಲಿ ಎಸೆಯಲ್ಪಟ್ಟಿರುವುದು ಕಂಡುಬಂದಿದ್ದು, ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಕಳೆದ ಭಾನುವಾರ ರಾತ್ರಿ ನಡೆದಿತ್ತು.

30 ಸೆಕೆಂಡ್‌ಗಳ ಸಿಸಿಟಿವಿ ತುಣುಕಿನಲ್ಲಿ ಸಂತ್ರಸ್ತೆ ಮತ್ತೊಬ್ಬ ಮಹಿಳೆ ಮತ್ತು ಇಬ್ಬರು ಮಕ್ಕಳೊಂದಿಗೆ ರಾತ್ರಿ ಎಕ್ಸ್‌ಪ್ರೆಸ್‌ವೇ ದಾಟಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಆ ಮಹಿಳೆ ಡಿವೈಡರ್‌ನಿಂದ ಎರಡನೇ ಲೇನ್‌ಗೆ ತಲುಪಿದ್ದಾಗ ಕಾರು ಆಕೆಗೆ ಡಿಕ್ಕಿ ಹೊಡೆದು ಅತಿ ವೇಗದಲ್ಲಿ ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಆ ಮಹಿಳೆ ಗಾಳಿಯಲ್ಲಿ ಎಸೆಯಲ್ಪಟ್ಟು ಮೂರು ಲೇನ್ ದೂರದಲ್ಲಿ ನೆಲಕ್ಕೆ ಬಿದ್ದಿದ್ದು. ಆಕೆಯ ಹಿಂದೆ ಬರುತ್ತಿದ್ದ ಮತ್ತೊಬ್ಬ ಮಹಿಳೆ ಮತ್ತು ಮಕ್ಕಳು ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read