ಪತಿ – ಪತ್ನಿ ಮಧ್ಯೆ ವಿಲನ್ ಆದ ಬೆಕ್ಕು: ಡಿವೋರ್ಸ್ ಕೇಳಿದ ಹೆಂಡತಿ

ಅದೆಷ್ಟೋ ಜನರ ಮನೆಯಲ್ಲಿ ನಾಯಿ, ಬೆಕ್ಕು, ಪಕ್ಷಿಗಳನ್ನ ಮನೆಯ ಸದಸ್ಯರಂತೆ ನೋಡೊಳ್ತಿರ್ತಾರೆ. ಪ್ರೀತಿಯಿಂದ ಮುದ್ದಾಡಿಸ್ತಿರ್ತಾರೆ. ಆದರೆ ಯಾವತ್ತಾದ್ರೂ ಯಾರಾದೂ ಪ್ರಾಣಿಗಳಿಗೋಸ್ಕರ ಡಿವೋರ್ಸ್‌ನ್ನೇ ಕೊಟ್ಟಿದ್ದನ್ನ ಕೇಳಿದ್ದೀರಾ? ಹಾಗೆಲ್ಲ ಆಗೋದಕ್ಕೆ ಚಾನ್ಸೇ ಇಲ್ಲ ಅಂತ ಅಂದ್ಕೊಳ್ಳಲೇ ಬೇಡಿ. ಯಾಕಂದ್ರೆ, ಇಲ್ಲೊಬ್ಬಳು ಮಾರಾಯ್ತಿ ಬೆಕ್ಕಿಗೋಸ್ಕರ ಗಂಡನನ್ನೇ ಬಿಡೋದಕ್ಕೆ ರೆಡಿಯಾಗಿದ್ದಾಳೆ.

ಗಂಡ – ಹೆಂಡತಿ ಇವರಿಬ್ಬರ ನಡುವೆ ಚಿಕ್ಕ ಪುಟ್ಟ ವಿಷಯಕ್ಕೆ ಗಲಾಟೆಗಳಾಗೋದು ಕಾಮನ್. ಕೆಲ ಜಗಳಗಳು ತಾರಕಕ್ಕೇರಿದಾಗ ವಿಚ್ಛೇದನ ಸಹ ಆಗಿಬಿಟ್ಟಿರುತ್ತೆ. ಆದರೆ ಇಲ್ಲೊಬ್ಬಳು ಮಹಾತಾಯಿ ತನ್ನ ಮುದ್ದಿನ ಬೆಕ್ಕಿಗಾಗಿ ಪತಿಗೆ ವಿಚ್ಛೇದನ ಕೊಡುವುದಕ್ಕೆ ರೆಡಿಯಾಗಿದ್ದಾಳೆ. ಅಸಲಿಗೆ ನಡೆದಿದ್ದೇನೆಂದರೆ, ಪತಿ ಮಹಾರಾಯ ಮನೆಯಲ್ಲಿ ಸಾಕಿದ್ದ ಬೆಕ್ಕನ್ನ ಕೋಪದಿಂದ ಹೊರಗೆ ಎಸೆದಿದ್ದಾನೆ. ಇದೇ ಕಾರಣಕ್ಕಾಗಿ ಮುನಿಸಿಕೊಂಡಿರುವ ಪತ್ನಿ, ಡಿವೋರ್ಸ್ ಕೊಡುವುದಕ್ಕೆ ರೆಡಿಯಾಗಿದ್ದಾಳೆ.

ಅಸಲಿಗೆ ಮಹಿಳೆ ಪಾಲಿಗೆ ಬೆಕ್ಕು ತನ್ನ ತಂದೆಯ ಪುನರ್ಜನ್ಮ ಎಂಬ ನಂಬಿಕೆ ಇದೆ. ಆ ಬೆಕ್ಕಿನ ಕಣ್ಣುಗಳನ್ನ ನೋಡಿದಾಗಲೆಲ್ಲಾ ತನ್ನ ತಂದೆಯ ನೆನಪಾಗುತ್ತೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಅದೇ ನಂಬಿಕೆಯಿಂದ ಚಿಕ್ಕವಳಿದ್ದಾಗಿನಿಂದಲೂ ಮುದ್ದಿನಿಂದ ಸಾಕಿದ್ದಾಳೆ.

ಹೆಂಡತಿಯ ಹುಚ್ಚಾಟವನ್ನ ನೋಡಿ ರೋಸಿ ಹೋಗಿದ್ದ ಗಂಡ, ಆಕೆ ಮನೆಯಿಂದ ಹೊರಗೆ ಹೋದಾಗ ಮನೆಯ ಹೊರಗಡೆ ಎಸೆದಿದ್ದಾನೆ. ಇದರಿಂದ ನೊಂದಿರುವ ಪತ್ನಿ ಈಗ ಗಂಡನ ಸಹವಾಸವೇ ಬೇಡ ಎಂದು ಡಿವೋರ್ಸ್ ಕೇಳುತ್ತಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read