ಹಾವೇರಿ: ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದೂರು ದಾಖಲಾಗಿದ್ದರಿಂದ ಮರ್ಯಾದೆಗೆ ಅಂಜಿದ ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ.
ದಾದಾಪೀರ್(38) ಆತ್ಮಹತ್ಯೆಗೆ ಮಾಡಿಕೊಂಡವರು. ದಾದಾಪೀರ್ ಅವರ ಸಹೋದರ ಮೊಹಮ್ಮದ್ ರಫೀಕ್ ಮತ್ತು ಆತನ ಪತ್ನಿ ನೂರ್ ಬೇಬಿ ಮಧ್ಯೆ ಕಲಹ ಉಂಟಾಗಿತ್ತು. ದಂಪತಿ ಮಧ್ಯದ ಕಲಹದಲ್ಲಿ ಕುಟುಂಬದವರೆಲ್ಲರ ಮೇಲೆ ದೂರು ನೀಡಲಾಗಿತ್ತು. ವರದಕ್ಷಿಣೆ ಕಿರುಕುಳ ನೀಡುತ್ತಿರುವುದಾಗಿ 11 ಜನರ ವಿರುದ್ಧ ರಫೀಕ್ ಪತ್ನಿ ನೂರ್ ಬೇಬಿ ಮಹಿಳಾ ಠಾಣೆಗೆ ನೀಡಿದ್ದಾರೆ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೆಗೆ ಆಗಮಿಸಿ ಸ್ಥಳ ಮಹಜರು ನಡೆಸಿದ್ದರು. ವಿಚಾರಣೆಗಾಗಿ ಠಾಣೆಗೆ ಬರುವಂತೆ ದಾದಾಪೀರ್ ಗೆ ಸೂಚಿಸಿದ್ದರು. ಇದರಿಂದ ಭಯಗೊಂಡ ದಾದಾಪೀರ್ ಮರ್ಯಾದೆಗೆ ಅಂಜಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
