ಬೆಂಗಳೂರು : ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿಯಾಗಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ಭೀಮನ ಅಮಾವಾಸ್ಯೆ ದಿನವೇ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.ಬೆಂಗಳೂರಿನ ಮಾದನಾಯಕನಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸ್ಪಂದನಾ (24) ಎಂದು ಗುರುತಿಸಲಾಗಿದೆ. ಮಹಿಳೆ ಸಾವಿಗೆ ವರದಕ್ಷಿಣೆ ಕಿರುಕುಳ ಕಾರಣ ಎಂದು ಸ್ಪಂದನಾ ಕುಟುಂಬಸ್ಥರು ಆರೋಪಿಸಿದ್ದಾರೆ .ಸ್ಪಂದನಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಆದರೆ ಇದು ಕೊಲೆ ಎಂದು ಸ್ಪಂದನಾ ಕುಟುಂಬದವರು ಆರೋಪಿಸಿದ್ದಾರೆ.
ನನ್ನ ಸಾವಿಗೆ ಅಭಿ ಹಾಗೂ ಅವರ ಕುಟುಂಬದವರು ಕಾರಣ ಎಂದು ಸ್ಪಂದನಾ ಸಾವಿಗೂ ಮುನ್ನ ತನ್ನ ತಂಗಿಗೆ ವಾಟ್ಸಾಪ್ ಮೂಲಕ ಮೆಸೇಜ್ ಕಳುಹಿಸಿದ್ದಾರೆ.
ಪೋಷಕರ ವಿರೋಧದ ನಡುವೆ ಸ್ಪಂದನಾ ಅಭಿಷೇಕ್ ಜೊತೆ ಮದುವೆ ಆಗಿದ್ದರು. ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲೇ ಅಭಿಷೇಕ್ ನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇದೀಗ ಅನುಮಾನಾಸ್ಪದವಾಗಿ ಮಹಿಳೆ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಸ್ಪಂದನಾ ಪೋಷಕರು ಈ ಆರೋಪ ಮಾಡಿದ್ದು, ಎಂಬಾತನ ಜೊತೆ ಸ್ಪಂದನಾ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮದುವೆ ನಂತರ ಪತಿ ಅಭಿಷೇಕ್ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದನುತಂದೆ ಚಂದ್ರಗೆ ಕರೆ ಮಾಡಿದ್ದ ಸ್ಪಂದನಾ ಈ ವಿಷಯ ತಿಳಿಸಿದ್ದರು. ನಂತರ 4 ಲಕ್ಷ ಕೊಟ್ಟು ರಾಜಿ ಸಂಧಾನ ಕೂಡ ಮಾಡಿದ್ದರು. ಆದರೂ ಪತಿ ಅಭಿಷೇಕ್ ಕಿರುಕುಳ ನೀಡಿದ್ದಾನೆ ಎಂದು ಸ್ಪಂದನಾ ಪೋಷಕರು ಆರೋಪಿಸಿದ್ದಾರೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.