ಡಿಜಿಟಲ್ ಡೆಸ್ಕ್ : ಕಾಡು ಹಂದಿ ಅಡ್ಡಬಂದು ಸ್ಕೂಟಿ ಸಮೇತ ಮಹಿಳೆಯೊಬ್ಬರು ಹಾರಿಬಿದ್ದಿದ್ದು, ಎದೆಝಲ್ ಎನಿಸೋ ವಿಡಿಯೋ ವೈರಲ್ ಆಗಿದೆ.
ರಸ್ತೆ ದಾಟುತ್ತಿದ್ದಾಗ ಕಾಡುಹಂದಿಗಳ ಹಿಂಡು ದ್ವಿಚಕ್ರ ವಾಹನದ ಮೇಲೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಗಸ್ಟ್ 8 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪೆರಿಂಗಮ್ಮಳ ಮೂಲದ ನಿಸಾ ಎಂದು ಗುರುತಿಸಲಾದ ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು., ನಿಸಾ ಕೇರಳದ ತಿರುವನಂತಪುರದಲ್ಲಿ ರಸ್ತೆಯಲ್ಲಿ ಮನೆಗೆ ಹೋಗುತ್ತಿದ್ದಾಗ, ಹಲವಾರು ಕಾಡುಹಂದಿಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡವು. ಒಂದು ದೊಡ್ಡ ಹಂದಿ ನೇರವಾಗಿ ಅವರ ಬೈಕ್ಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಹಾರಿ ಬಿದ್ದಿದೆ. ಅವರು ಹೆಲ್ಮೆಟ್ ಧರಿಸಿದ್ದರೂ ಹೆಲ್ಮೆಟ್ ಬೆಲ್ಟ್ ಹಾಕಿರಲಿಲ್ಲ , ಆದ್ದರಿಂದ ಹೆಚ್ಚಿನ ಪೆಟ್ಟಾಗಿದೆ. ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಬಂದು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದರು.
கேரளா – திருவனந்தபுரம் : சாலையின் குறுக்கே வந்த காட்டு பன்றி ஒன்று, பைக்கில் மோதியதில் பெண் கீழே விழுந்து காயம் pic.twitter.com/f9kcKMINlB
— Kᴀʙᴇᴇʀ – தக்கலை கபீர் (@Autokabeer) August 9, 2025