ನಲ್ಗೊಂಡ: ವಿವಾಹಿತ ಮಹಿಳೆಯೊಬ್ಬಳು ತನ್ನ ಒಂದು ವರ್ಷದ ಮಗುವನ್ನು ಬಸ್ ಸ್ಟ್ಯಾಂಡ್ ನಲ್ಲಿ ಬಿಟ್ತು ಪ್ರಿಯಕರನೊಂದಿಗೆ ಬೈಕ್ ನಲ್ಲಿ ಪರಾರಿಯಾಗಿರುವ ಘಟನೆ ತೆಲಂಗಾಣದ ನಲ್ಗೊಂಡದಲ್ಲಿ ನಡೆದಿದೆ.
ಇನ್ ಸ್ಟಾಗ್ರಾಂ ನಲ್ಲಿ ಪರಿಚಯನಾದ ಹೈದರಾಬಾದ್ ನ ಓಲ್ಡ್ ಸಿಟಿ ಪ್ರದೇಶದ ವ್ಯಕ್ತಿಯೊಂದಿದೆ ಹೋಗಲು ಮಹಿಳೆ ತನ್ನ ಒಂದು ವರ್ಷದ ಕಂದನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಮಹಿಳೆಯೊಬ್ಬಳು ಬಸ್ ನಿಲ್ದಾಣಕ್ಕೆ ಮಗು ಎತ್ತಿಕೊಂಡು ಬಂದು ಬಳಿಕ ಅಲ್ಲಿಯೇ ಬಿಟ್ಟು ವ್ಯಕ್ತಿಯೊಬ್ಬನ ಬೈಕ್ ಹತ್ತಿ ಪರಾರಿಯಾಗಿದ್ದಾಳೆ. ಬಸ್ ನಿಲ್ದಾಣದಲ್ಲಿ ಮಗು ಒಂದೇ ಸಮನೇ ಅಳುತ್ತಿರುವುದನ್ನು ನೋಡಿ ಬಸ್ ನಿಲ್ದಾಣದ ಸಿಬ್ಬಂದಿ, ಡಿಪೋ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಮಗುವಿನ ತಾಯಿ ಮಗುವನ್ನು ಬಿಟ್ಟು ವ್ಯಕ್ತಿಯೊಬ್ಬನ ಜೊತೆ ಬೈಕ್ ನಲ್ಲಿ ಹೋಗಿರುವುದು ಗೊತ್ತಾಗಿದೆ.
ಬೈಕ್ ನಂಬರ್ ಆಧರಿಸಿ ವ್ಯಕ್ತಿಯನ್ನು ಹಾಗೂ ಮಹಿಳೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಒಂದುವರ್ಷದ ಮಗುವನ್ನು ತಂದೆಗೆ ಹಸ್ತಾಂತರಿಸಲಾಗಿದೆ.