ಕಾರವಾರ: ಕಾರಿನ ಮೇಲೆ ಬೃಹತ್ ಮರ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಲಕ್ಷ್ಮೀ ಪಾಗಿ ಮೃತ ಮಹಿಳೆ. ಲಕ್ಷ್ಮೀ ಪಾಗಿ 8 ತಿಂಗಳ ಗರ್ಭಿಣಿ ಸೊಸೆ ಸುನಿತಾ ಜೊತೆ ಕಾರವಾರದ ಪಿಕಳೆ ಆಸ್ಪತ್ರೆಗೆ ಕಾರಿನಲ್ಲಿ ಬಂದಿದ್ದರು. ಆಸ್ಪತ್ರೆ ಮುಂದೆ ಕಾರು ನಿಲ್ಲಿಸುತ್ತಿದ್ದ ವೇಳೆ ಬಿರುಗಾಳಿ ಮಳೆಗೆ ಬೃಹತ್ ಮರವೊಂದು ಕಾರಿನ ಮೇಲೆ ಬಿದ್ದಿದೆ. ತಕ್ಷಣ ಕಾರಿನ ಡೋರ್ ತೆರೆದು ಗರ್ಭಿಣಿ ಸೊಸೆ ಕೆಳಗಿಳಿದು ಪಾರಾಗಿದ್ದಾರೆ, ಅಷ್ಟರಲ್ಲಿ ಕಾರಿನ ಮತ್ತೊಂದು ಭಾಗದಲ್ಲಿ ಸಿಲುಕಿಕೊಂಡಿದ್ದ ಅತ್ತೆ ಲಕ್ಷ್ಮಿ ಕಾರಿನಿಂದ ಹೊರ ಬರಲಾಗದೇ ಪರದಾಡಿದ್ದರು.
ಸ್ಥಳೀಯರು ಹಾಗೂ ನಗರಸಭೆ ಸಿಬ್ಬಂದಿ ಹರಸಾಹಸ ಪಟ್ಟು ಲಕ್ಷ್ಮೀ ಅವರನ್ನು ಹೊರ ತೆಗೆದು ಆಸ್ಪತ್ತೆಗೆ ದಾಖಲಿಸಿದ್ದರು, ಮರ ಬಿದ್ದು ಕಾರಿನಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾಗಿರುವ ಗಂಭಿಣಿ ಸೊಸೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.