ಬೆಂಗಳೂರು: ಮಹಿಳೆಯೊಬ್ಬರು ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಅಂಜನಾಪುರದಲ್ಲಿ ನಡೆದಿದೆ.
ನೇತ್ರಾವತಿ (30) ಮೃತ ಮಹಿಳೆ. ಪತಿ ಸೋಮಶೇಖರ್ ಹಾಗೂ ಅತ್ತೆ ವಿರುದ್ಧ ಮೃತ ಮಹಿಳೆಯ ಪೋಷಕರು ಆರೋಪ ಮಾಡಿದ್ದು, ದೂರು ನೀಡಿದ್ದಾರೆ.
ನೇತ್ರಾವತಿ ಪತಿ ಸೋಮಶೇಖರ್ ನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ದೂರು ನೀಡಲಾಗಿದೆ. ರಾತ್ರಿ ಅತ್ತೆ, ಸೊಸೆ, ಪತಿ ನಡುವೆ ಜಗಳವಾಗಿದೆ. ಪತಿ ಸೋಮಶೇಖರ್ ಮಗಳ ಕೆನ್ನೆಗೆ ಹೊಡೆದಿದ್ದಾರೆ. ಮಗಳು ನೇತ್ರಾವತಿ ಕೆನ್ನೆಗೆ ಹೊಡೆದಿರುವ ಗುರುತುಗಳಿವೆ. ಪತಿ ಸೋಮಶೇಖರ್ ಹಲ್ಲೆ ಮಾಡಿದ್ದಾರಿಂದಲೇ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪತಿ ಸೋಮಶೇಖರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.