Video: ಚಲಿಸುತ್ತಿದ್ದ ರೈಲಿನಲ್ಲಿ ಸಾಹಸಕ್ಕೆ ಮುಂದಾದ ಯುವತಿ; ಮುಂದೇನಾಯ್ತು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ವಿಡಿಯೋ, ರೀಲ್ಸ್‌ ಹುಚ್ಚಿಗೆ ಅನೇಕರು ಪ್ರಾಣ ಕಳೆದುಕೊಳ್ತಿದ್ದಾರೆ. ಪ್ರತಿ ದಿನ ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಬರ್ತಿದ್ದರೂ ಜನರಿಗೆ ಬುದ್ದಿ ಬಂದಿಲ್ಲ. ಈಗ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. ರೈಲಿನ ಮೆಟ್ಟಿಲ ಮೇಲೆ ನಿಂತು ವಿಡಿಯೋಕ್ಕೆ ಫೋಸ್‌ ನೀಡ್ತಿರುವ ಮಹಿಳೆ ಗಾಯಗೊಂಡ ಘಟನೆ ನಡೆದಿದೆ.

ಘಟನೆ ಥಾಯ್ಲೆಂಡ್‌ನಲ್ಲಿ ನಡೆದಿದೆ. ಚಲಿಸುತ್ತಿರುವ ರೈಲಿನಿಂದ ಅಪಾಯಕಾರಿ ಸಾಹಸಕ್ಕೆ ಮಹಿಳೆ ಮುಂದಾಗಿದ್ದಳು. ಫಠಾಲುಂಗ್ ನಿಲ್ದಾಣದ ಬಳಿ ಪೋಸ್ಟ್‌ ಮಹಿಳೆ ಮುಖಕ್ಕೆ ಹೊಡೆದಿದೆ. ಆಗಸ್ಟ್ 5 ರಂದು ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಘಟನೆ ನಂತ್ರ ಸ್ಟೇಟ್ ರೈಲ್ವೇ ಆಫ್ ಥೈಲ್ಯಾಂಡ್ ಸುರಕ್ಷತಾ ಎಚ್ಚರಿಕೆಯನ್ನು ನೀಡಿದೆ. ಪ್ರಯಾಣಿಕರು ಇಂಥ ಅಜಾಗರೂಕ ವರ್ತನೆಯಿಂದ ದೂರವಿರಬೇಕು ಎಂದು ಎಸ್‌ಆರ್‌ಟಿ ಮನವಿ ಮಾಡಿದೆ. ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

https://twitter.com/PR_SRT/status/1823324008122892373?ref_src=twsrc%5Etfw%7Ctwcamp%5Etweetembed%7Ctwterm%5E1823324008122892373%7Ctwgr%5Eaba3bdeb5f718b23c3580f9c170bb5ddbcd241fb%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fthailandwomandanglingfrommovingtrainsuffersinjuryafterhittingpostnearphatthalungstationstaterailwayofthailandissuessafetywarningaftervideogoesviral-newsid-n626434999

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read