Viral Video: ಮೆಟ್ರೋ ಆಯ್ತು ಈಗ ಏರ್ಪೋರ್ಟ್ ಗೂ ಬಂತು…! ಇದ್ದಕ್ಕಿದ್ದಂತೆ ಕುಣಿದು ಕುಪ್ಪಳಿಸಿದ ಯುವತಿ

ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ – ಕಾಮೆಂಟ್ಸ್ ಪಡೆದುಕೊಂಡು ಜೊತೆಗೆ ಪ್ರಚಾರ ಗಿಟ್ಟಿಸುವ ಸಲುವಾಗಿ ಇದುವರೆಗೆ ಮೆಟ್ರೋದಲ್ಲಿ ಯುವಕ – ಯುವತಿಯರು ಡಾನ್ಸ್ ಮಾಡಿರುವ ಹಲವು ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಇದರಲ್ಲಿ ಯುವತಿಯೊಬ್ಬಳು ಅಶ್ಲೀಲ ನೃತ್ಯ ಮಾಡಿದ್ದು ಸಹ ಹರಿದಾಡಿತ್ತು.

ಮೆಟ್ರೋದಲ್ಲಿ ಇಂತಹ ವರ್ತನೆ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡುತ್ತಿರುವ ಹೊರತಾಗಿಯೂ ಇಂತಹ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ. ಇದೀಗ ಈ ಕಾಯಿಲೆ ಏರ್ಪೋರ್ಟಿಗೂ ವಕ್ಕರಿಸಿದಂತೆ ಕಂಡುಬರುತ್ತದೆ. ಇದಕ್ಕೆ ಪೂರಕವೆಂಬಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು ಇದರಲ್ಲಿ ಯುವತಿ ಕುಣಿದು ಕುಪ್ಪಳಿಸಿದ್ದಾಳೆ.

ವಿಡಿಯೋದಲ್ಲಿ ಕಂಡುಬಂದಂತೆ ಯುವತಿ ನಡೆದುಕೊಂಡು ಬರುತ್ತಿದ್ದು, ಮೈ ಮೇಲೆ ದೆವ್ವ ಬಂದಂತೆ ಇದ್ದಕ್ಕಿದ್ದಂತೆ ಕುಣಿಯಲು ಆರಂಭಿಸಿದ್ದಾಳೆ. ಅಕ್ಕ ಪಕ್ಕದಲ್ಲಿದ್ದವರಿಗೆ ಇದರಿಂದ ತೊಂದರೆಯಾಗುತ್ತಿದ್ದರೂ ಸಹ ಆಕೆ ಇದನ್ನು ಲೆಕ್ಕಿಸಿಲ್ಲ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಇದನ್ನು ವೀಕ್ಷಿಸಿದ ನೆಟ್ಟಿಗರು ಆಕೆಯ ವರ್ತನೆಯನ್ನು ಕಟು ಶಬ್ದಗಳಲ್ಲಿ ಖಂಡಿಸುತ್ತಿದ್ದಾರೆ.

ಇದಕ್ಕೆ ಕಾಮೆಂಟ್ ಮಾಡಿರುವ ಒಬ್ಬರು, ಇದುವರೆಗೆ ಮೆಟ್ರೋದಲ್ಲಿದ್ದ ಈ ಕಾಯಿಲೆ ಈಗ ಏರ್ಪೋರ್ಟ್ ಗೂ ಬಂತಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ಸಾರ್ವಜನಿಕ ಸ್ಥಳಗಳಲ್ಲಿ ಇತರೆಯವರಿಗೆ ತೊಂದರೆ ಆಗುತ್ತಿದ್ದರೂ ಸಹ ಆಕೆ ಇದನ್ನು ಗಣನೆಗೆ ತೆಗೆದುಕೊಂಡಂತೆ ಕಾಣಿಸುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

https://twitter.com/desimojito/status/1795773861340070011?ref_src=twsrc%5Etfw%7Ctwcamp%5Etweetembed%7Ctwterm%5E1795773861340070011%7Ctwgr%5E48462773266a9ca3e3656a753a194ba51e

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read