ಸತ್ತು ಸ್ವರ್ಗ ಸೇರಿದ್ದಳಂತೆ ಈ ಮಹಿಳೆ; ಬದುಕಿ ಬಂದ ಬಳಿಕ ಅನುಭವ ಬಿಚ್ಚಿಟ್ಟ ಲೇಡಿ

ಸಾವಿನ ಸಮೀಪ ಹೋಗಿ ಬದುಕುಳಿದಿರುವ ಅನೇಕ ಜನರು ಸ್ವರ್ಗವನ್ನು ನೋಡಿ ಬಂದಿರುವುದಾಗಿ ಹೇಳಿಕೊಳ್ಳುವುದು ಇದೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ವೈದ್ಯರು ಸತ್ತಿದ್ದಾಳೆ ಎಂದು ಘೋಷಿಸಲ್ಪಟ್ಟ ಮಹಿಳೆಯೊಬ್ಬಳು ಪವಾಡಸದೃಶವಾಗಿ ಬದುಕುಳಿದಿರುವ ಘಟನೆ ಇದು.

ಹದಿನಾಲ್ಕು ನಿಮಿಷಗಳಿಗಿಂತ ಹೆಚ್ಚು ಕಾಲ ಸತ್ತೇ ಹೋಗಿದ್ದ ಮಹಿಳೆ ಕೊನೆಗೆ ಬದುಕಿರುವ ಘಟನೆ ನಡೆದಿದೆ. ಡಾ ಲಿಂಡಾ ಕ್ರಾಮರ್ ಎನ್ನುವ ಮಹಿಳೆ ಈಗ ಸ್ವರ್ಗದ ಅನುಭವವನ್ನು ಹಂಚಿಕೊಂಡಿದ್ದಾರೆ. ‘ಮೌಂಟ್ ಎವರೆಸ್ಟ್‌ಗಿಂತ 30 ಸಾವಿರ ಪಟ್ಟು ದೊಡ್ಡದಾದ ಪರ್ವತ ಶ್ರೇಣಿಯನ್ನು ತಾವು ನೋಡಿರುವುದಾಗಿ ಈಕೆ ಹೇಳಿಕೊಂಡಿದ್ದಾಳೆ.”

“ನಾನು ಸತ್ತು ಸ್ವರ್ಗದಲ್ಲಿದ್ದೆ. ಆ ಸಮಯದಲ್ಲಿ ನಾನು ಹೂವಿನ ಕ್ಷೇತ್ರ ಎಂದು ಕರೆಯುವ ಸ್ಥಳದಲ್ಲಿ ನಿಂತಿದ್ದೆ. ನಾನು ಮೌಂಟ್ ಎವರೆಸ್ಟ್ ಗಿಂತ 30 ಸಾವಿರ ಪಟ್ಟು ದೊಡ್ಡದಾದ ಪರ್ವತ ಶ್ರೇಣಿಯನ್ನು ಗಮನಿಸುತ್ತಿದ್ದೆ. ನನ್ನ ಹಿಂದೆ ಒಂದು ಬೃಹತ್ ಪರ್ವತ ಶ್ರೇಣಿ ಇತ್ತು. ಅಲ್ಲಿ ಗಗನಚುಂಬಿ ಕಟ್ಟಡಗಳು ಇದ್ದವು. ಮನೆಗಳಿದ್ದವು. ಅಲ್ಲಿ ಅನೇಕ ಸರೋವರಗಳು ಇದ್ದವು. ಅಲ್ಲಿಯ ಜನರೊಂದಿಗೆ ನಾನು ಸಂವಹನ ನಡೆಸುತ್ತಿದ್ದೆ” ಎಂದು ಹೇಳಿಕೊಂಡಿದ್ದಾರೆ.

ಈ ಹಿಂದೆ ಕೂಡ ಇಂಥ ಘಟನೆಗಳು ನಡೆದಿದ್ದು, ಅವರು ಕೂಡ ಸಾವಿನ ನಂತರದ ಸ್ವರ್ಗವನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯುತ್ತಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read