ಲಖನೌ: ಮಹಿಳೆಯೊಬ್ಬರು ಸೊಂಟಕ್ಕೆ ಮೂವರು ಮಕ್ಕಳನ್ನು ಕಟ್ಟಿಕೊಂಡು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೆಶದ ಬಂದಾದಲ್ಲಿ ನಡೆದಿದೆ.
ಇಲ್ಲಿನ ರಿಸೌರಾ ಗ್ರಾಮದಲ್ಲಿ ಈ ದುರಂತ ನಡೆದಿದೆ. ಮೃತರನ್ನು ಮಹಿಳೆ ರೀನಾ ಹಾಗೂ ಮಕ್ಕಳಾದ ಹಿಮಾಂಶು (9), ಅನ್ಶಿ (5), ಪ್ರಿನ್ಸ್ (3) ಎಂದು ಗುರುತುಸಲಾಗಿದೆ.
ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪತಿ ಅಖಿಲೇಶ್ ಹಾಗೂ ಪತ್ನಿ ರೀನಾ ಇಬ್ಬರೂ ಜಗಳವಾಡಿದ್ದರು. ಗಲಾಟೆ ಬಳಿಕ ಮನನೊಂದಿದ್ದ ಪತ್ನಿ ರೀನಾ, ಪತಿಗೂ ಹೇಳದೇರಾತ್ರಿ ಮಕ್ಕಳನ್ನು ಕರೆದೊಯ್ದಿದ್ದಾರೆ. ಬೆಳಿಗ್ಗೆ ಮನೆಯಲ್ಲಿ ರೀನಾ ಹಾಗೂ ಮಕ್ಕಳು ಕಾಣದಿದ್ದಾಗ ಹುಡುಕಾಟ ನಡೆಸಿದ್ದಾರೆ.
ಕಾಲುವೆಯ ಬಳಿ ಚಪ್ಪಲಿ, ಬಟ್ಟೆ ಪತ್ತೆಯಾಗಿವೆ. ತಕ್ಷಣ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಲುವೆಯಲ್ಲಿ ಶೋಧ ನಡೆಸಿದಾಗ ಮಹಿಳೆ ಹಾಗೂ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.