ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು, ಇದರಲ್ಲಿ ಮೆಟ್ರೋ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವತಿಯನ್ನು ಪೊಲೀಸರು ಸಮಯ ಪ್ರಜ್ಞೆ ಮೆರೆದು ರಕ್ಷಿಸಿದ್ದಾರೆ. ಇಂತಹುದೊಂದು ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಹಾಡಹಗಲೇ ಈ ಯುವತಿ ಮೆಟ್ರೋ ಸೇತುವೆ ಮೇಲೇರಿದ್ದು, ಮೊಬೈಲ್ ನಲ್ಲಿ ಯಾರೊಂದಿಗೋ ಮಾತನಾಡುತ್ತಲೇ ಹಾರಲು ಮುಂದಾಗಿದ್ದಾಳೆ. ಈ ದೃಶ್ಯವನ್ನು ನೋಡಿದ ಜನ ಹಾಗೆ ಮಾಡದಂತೆ ಕೂಗಿ ಕೂಗಿ ಎಚ್ಚರಿಸಿದ್ದಾರೆ. ಅಲ್ಲದೆ ಪೊಲೀಸರಿಗೂ ವಿಷಯ ಮುಟ್ಟಿಸಿದ್ದಾರೆ.
ತಕ್ಷಣವೇ ಎಚ್ಚೆತ್ತ ಪೊಲೀಸರು ಮೆಟ್ರೋ ರೈಲಿನ ಮೂಲಕವೇ ಯುವತಿಯನ್ನು ಸಮೀಪಿಸಿದ್ದಾರೆ. ಆ ಸಂದರ್ಭದಲ್ಲಿ ಇನ್ನೇನು ಆಕೆ ಮೇಲಿನಿಂದ ಹಾರುತ್ತಾಳೆ ಎನ್ನುವಾಗ ಆಕೆಯನ್ನು ಹಿಡಿದು ರಕ್ಷಿಸಿದ್ದಾರೆ. ಈ ಯುವತಿ ಯಾರು ? ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು ? ಎಂಬುದರ ಕುರಿತು ಹೆಚ್ಚಿನ ವಿವರ ಲಭ್ಯವಾಗಿಲ್ಲ.
#Delhi– Girl was jumping from the track of metro station.. police saved her. #delhimetro #delhigirls #DelhiGovernment #Delhi #METRO4D #Metro #दिल्ली #दिल्लीमेट्रो #दिल्लीमैट्रो pic.twitter.com/4sM7nPva4t
— Indian Observer (@ag_Journalist) December 12, 2023