ಚಾಮರಾಜನಗರ : ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ವಿಷ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಒತ್ತುವರಿ ಆದ ಜಾಗ ತೆರವು ಮಾಡಿಕೊಡುವಂತೆ ಪಿಡಿಒಗೆ ಮಹಿಳೆ ಹಲವು ಬಾರಿ ಮನವಿ ಮಾಡಿದ್ದರು. ಹಲವು ಬಾರಿ ಪಂಚಾಯಿತಿಗೆ ಅಲೆದರೂ ನ್ಯಾಯ ಸಿಗಲಿಲ್ಲ ಎಂದು ಬೇಸತ್ತ ಮಹಿಳೆ ಪಂಚಾಯಿತಿಯಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಕೂಡಲೇ ಪೊಲೀಸರು ಬಾಟಲಿ ಕಿತ್ತುಕೊಂಡು ಮಹಿಳೆಯನ್ನು ರಕ್ಷಿಸಿದ್ದಾರೆ.
ಒತ್ತುವರಿ ಆದ ಜಾಗ ತೆರವು ಮಾಡಿಕೊಡುವಂತೆ ಮನವಿ ಮಾಡಿದ್ದರೂ ಪಿಡಿಒ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
You Might Also Like
TAGGED:ಗ್ರಾಮ ಪಂಚಾಯಿತಿ