ಸ್ಕೈ ಡೈವಿಂಗ್ ಮಾಡುತ್ತಾ ಮೇಕಪ್; ಸಾಹಸಿ ಯುವತಿ ವಿಡಿಯೋ ವೈರಲ್

10 ಸಾವಿರ ಅಡಿ ಎತ್ತರದಲ್ಲಿದ್ದೀವಿ ಅಂತ ಗೊತ್ತಾದ್ರೆನೇ ಜೀವ ಕೈಗೆ ಬಂದಂತಾಗುತ್ತೆ. ಅಂಥದ್ರಲ್ಲಿ 10 ಸಾವಿರ ಅಡಿ ಎತ್ತರದಲ್ಲಿ ಮೇಕಪ್ ಮಾಡಿಕೊಳ್ತಾರೆ ಅಂದ್ರೆ ಅಚ್ಚರಿಯಾಗುತ್ತೆ ಅಲ್ವಾ? ಆದರೆ ಇದು ಘಟಿಸಿದೆ. ನಮ್ಮಲ್ಲಿ ಕೆಲವರು ಮಾತ್ರ ಪ್ರಯತ್ನಿಸುವ ಧೈರ್ಯವನ್ನು ಹೊಂದಿದ್ದಾರೆ.

ಅಂತಹ ಧೈರ್ಯವನ್ನ ಮೆಕೆನ್ನಾ ನೈಪ್ ಎಂಬ ಯುವತಿ ಮಾಡಿದ್ದಾರೆ. ಮೆಕೆನ್ನಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವಶಾಲಿ ಮಹಿಳೆ. ಅವರು 10,000 ಅಡಿಗಳಿಂದ ಸ್ಕೈಡೈವಿಂಗ್ ಮಾಡುವಾಗ ಮೇಕಪ್ ಮಾಡಿಕೊಂಡಿದ್ದಾರೆ.

ಈ ವಿಡಿಯೋನ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ 5 ಲಕ್ಷಕ್ಕೂ ಹೆಚ್ಚು ವೀವ್ಸ್ ಕಂಡಿದೆ.

ಇದು ಸಾಕಷ್ಟು ಧೈರ್ಯಶಾಲಿ ಪ್ರಯತ್ನ ಎಂದು ನೆಟ್ಟಿಗರು ಪ್ರಶಂಸಿದ್ದಾರೆ. ಸಾಹಸ ಚಟುವಟಿಕೆಗಳನ್ನು ನಡೆಸುವ ಮೆಕೆನ್ನಾ ನೈಪ್ ಸ್ಕೈಡೈವಿಂಗ್ ಮಾಡುವಾಗ ಕ್ರೇಜಿ ಸ್ಟಂಟ್‌ಗಳನ್ನು ಮಾಡುತ್ತಾರೆ.

https://youtu.be/tPu07oztI8A

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read