ವಿಶಾಖಪಟ್ಟಣಂನಲ್ಲಿ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯವಾಡಲು ಬಂದಿಳಿದ ರೋಹಿತ್ ಶರ್ಮಾ ಅಭಿಮಾನಿಯೊಂದಿಗೆ ನಡೆದುಕೊಂಡ ರೀತಿ ಗಮನ ಸೆಳೆದಿದೆ.
ಭಾನುವಾರ ಪಂದ್ಯವಾಡಲು ವೈಜಾಗ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನ ಅಭಿಮಾನಿಗಳು ಸ್ವಾಗತಿಸಿದರು. ಈ ವೇಳೆ ಅಭಿಮಾನಿಯೊಬ್ಬ ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗ ಆತನ ಹಿಂಬದಿಯಲ್ಲಿ ರೋಹಿತ್ ಶರ್ಮಾ ಮತ್ತು ಟೀಂ ಇಂಡಿಯಾದ ಸದಸ್ಯರು ಹೋಗುತ್ತಿದ್ದರು.
ಈ ವೇಳೆ ರೋಹಿತ್ ತನ್ನ ಬಳಿಯಿದ್ದ ಗುಲಾಬಿಯನ್ನು ಅವರಿಗೆ ನೀಡಿ “ಇದನ್ನು ತೆಗೆದುಕೊಳ್ಳಿ, ಇದು ನಿನಗಾಗಿ” ಎಂದು ಹೇಳಿದರು. ಅದಕ್ಕೆ ಅಭಿಮಾನಿ ಧನ್ಯವಾದ ಹೇಳಲು ಮುಂದಾದಾಗ, ರೋಹಿತ್ ಶರ್ಮಾ , ‘ನನ್ನನ್ನು ಮದುವೆಯಾಗುತ್ತೀರಾ?ʼ ಎಂದು ತಮಾಷೆಯಾಗಿ ಕೇಳಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗ್ತಿದೆ.
https://twitter.com/mufaddal_vohra/status/1637367516501532672?ref_src=twsrc%5Etfw%7Ctwcamp%5Etweetembed%7Ctwterm%5E1637367516501532672%7Ctwgr%5Eb8e5d9046fca5667f77f64fbd4b69d5bfe59d4a7%7Ctwcon%5Es1_&ref_url=https%3A%2F%2Fsports.ndtv.com%2Findia-vs-australia-2023%2Fwill-you-marry-me-rohit-sharmas-hilarious-proposal-to-fan-watch-3874738