Viral Video | ನೀವು ಚುನಾವಣೆಗೆ ಸ್ಪರ್ಧಿಸುತ್ತೀರಾ ? ಮಹಿಳೆಯ ಭಾಷಣ ಕೌಶಲ್ಯಕ್ಕೆ ಬೆರಗಾಗಿ ಪ್ರಶ್ನಿಸಿದ ಪ್ರಧಾನಿ

ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆ ದೇಶಾದ್ಯಂತ ನಡೆಯುತ್ತಿದೆ. ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ವಾರಣಾಸಿಯ ಸೇವಾಪುರಿ ಬ್ಲಾಕ್‌ನ ಬಾರ್ಕಿ ಗ್ರಾಮಸಭೆಯಲ್ಲಿ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರದ ಯೋಜನೆಗಳ ಫಲಾನುಭವಿ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅತ್ಯುತ್ತಮವಾಗಿ ಭಾಷಣ ಮಾಡಿದ ಮಹಿಳೆಯೊಬ್ಬರನ್ನು ಪ್ರಧಾನಿ ಮೋದಿ ನೀವು ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂದು ಪ್ರಶ್ನಿಸಿದ ಪ್ರಸಂಗ ನಡೆಯಿತು.

ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಭಾಗವಾದ ‘ಮೇರಿ ಕಹಾನಿ, ಮೇರಿ ಜುಬಾನಿ’ ಕಾರ್ಯಕ್ರಮದ ಸಂದರ್ಭದಲ್ಲಿ ಸಭಿಕರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡ ಫಲಾನುಭವಿ ಚಂದಾ ದೇವಿ ಅವರೊಂದಿಗೆ ಸಂವಾದ ನಡೆಸುವಾಗ ಪ್ರಧಾನಿ ಮೋದಿ ಈ ಪ್ರಶ್ನೆಯನ್ನು ಮುಂದಿಟ್ಟರು.

ಚಂದಾ ದೇವಿಯವರ ಆತ್ಮವಿಶ್ವಾಸ ಮತ್ತು ವಾಕ್ಚಾತುರ್ಯದಿಂದ ಪ್ರಭಾವಿತರಾದ ಪ್ರಧಾನಿಯವರು ಆಕೆಯ ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಕೇಳಿದರು. ಇಂಟರ್ ಮೀಡಿಯೆಟ್ ಮುಗಿಸಿರುವುದಾಗಿ ಚಂದಾದೇವಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದೀರಾ ಎಂದು ವಿಚಾರಿಸಿದರು. ಇಲ್ಲ ಎಂದು ಉತ್ತರಿಸಿದ ಚಂದಾದೇವಿಯನ್ನು ಹಾಗಾದರೆ, ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂದು ಪ್ರಶ್ನಿಸಿದರು.

ಅತ್ಯುತ್ತಮ ಸಾರ್ವಜನಿಕ ಭಾಷಣ ಕೌಶಲ್ಯವನ್ನು ಹೊಂದಿದ ಚಂದಾ ದೇವಿಯನ್ನು ಪ್ರಧಾನಿ ಮೋದಿ ಪ್ರಶಂಸಿಸಿದರು. ಈ ವೇಳೆ ಚಂದಾದೇವಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಆದರೆ ನಿಮ್ಮ ಭಾಷಣ ಕಲೆಯಿಂದ ಪ್ರಭಾವಿತಳಾಗಿದ್ದೇನೆ. ನಿಮ್ಮ ಮುಂದೆ ಮಾತನಾಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಸರ್ಕಾರ ಪ್ರಾರಂಭಿಸಿದ ಅಭಿವೃದ್ಧಿಯ ಪ್ರಯತ್ನಗಳಲ್ಲಿ ಭಾಗವಾಗಲು ನಾನು ಬಯಸುತ್ತೇನೆ ಎಂದು ಹೇಳಿದರು. ತಮ್ಮ ಮಕ್ಕಳ ಶಿಕ್ಷಣ , ಕುಟುಂಬ ನಿರ್ವಹಣೆ ಮತ್ತು ತಮ್ಮ ಕೆಲಸದ ನಡುವೆ ಹೇಗೆ ಸಮತೋಲನವನ್ನು ಕಾಯ್ದುಕೊಂಡಿದ್ದಾರೆ ಎಂಬುದರ ಬಗ್ಗೆಯೂ ಪ್ರಧಾನಿ ಈ ವೇಳೆ ವಿಚಾರಿಸಿದರು.

https://twitter.com/NewsroomPostCom/status/1736739854334005603?ref_src=twsrc%5Etfw%7Ctwcamp%5Etweetembed%7Ctwterm%5E1736739854334005603%7Ctwgr%5Eb2179c2655d993bba932a5aa0007436283e55b38%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnewsroompost-epaper-dhbf4ce091df1d4c28819e43b257c2d435%2Fwillyoucontestelectionspmasksbeneficiarywomanatviksitbharatsankalpyatravideo-newsid-n566495970

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read