BREAKING : ಡಿಸಿಎಂ ಆಗ್ತೀರೋ..ಜೈಲಿಗೆ ಹೋಗ್ತೀರೋ..? : ಬಿಜೆಪಿ ಆಫರ್ ಬಗ್ಗೆ DCM ಡಿ.ಕೆ ಶಿವಕುಮಾರ್ ಸ್ಪೋಟಕ ಹೇಳಿಕೆ.!

ಬೆಂಗಳೂರು : ಬಿಜೆಪಿ ಆಫರ್ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹೌದು. ಬಿಜೆಪಿ ನೀಡಿದ ಆಫರ್ ಬಗ್ಗೆ ಡಿಸಿಎಂ ಡಿಕೆಶಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. A symbol of loyalty ಪುಸ್ತಕ ಬಿಡುಗಡೆ ವೇಳೆ ಅವರು ಮಾತನಾಡಿದ್ದಾರೆ.

ನನಗೆ ಡಿಸಿಎಂ ಆಗ್ತೀರಾ..? ಜೈಲಿಗೆ ಹೋಗ್ತೀರಾ ಅಂತ ಆಫರ್ ಕೊಟ್ರು..ಆದರೆ ನಾನು ಪಕ್ಷ ನಿಷ್ಠೆಯಿಂದ ಜೈಲಿಗೆ ಹೋಗುತ್ತೀನಿ ಎಂದೆ. ನಾನು ಮನಸ್ಸು ಮಾಡಿದ್ರೆ ಅವತ್ತೇ ಡಿಸಿಎಂ ಆಗುತ್ತಿದ್ದೆ. ದೆಹಲಿಯಿಂದ ಯಾರೋ ನನಗೆ ಫೋನ್ ಮಾಡಿದ್ರು, ಅವರ ಹೆಸರು ಹೇಳಲ್ಲ. ನೀವು ಡಿಸಿಎಂ ಆಗ್ತೀರೋ..ಜೈಲಿಗೆ ಹೋಗ್ತೀರೋ ಎಂದು ಕೇಳಿದ್ರು,.ಎರಡರಲ್ಲಿ ಒಂದು ಆಯ್ಕೆ ಮಾಡಿ ಎಂದಿದ್ದರು. ಏನು ಮಾಡೋದು ಹೇಳಿ..ಪಕ್ಷದ ನಿಷ್ಠೆ..ಅದಕ್ಕೆ ನಾನು ಜೈಲಿಗೆ ಹೋಗುತ್ತೀನಿ ಎಂದು ಹೇಳಿದೆ ಎಂದು ಡಿಸಿಎಂ ಡಿಕೆಶಿ ಹೇಳಿದರು.ರಾಜಕೀಯದಲ್ಲಿ ಯಾವುದು ನಿಂತ ನೀರಲ್ಲ. ನಾನು ಮುಂದಿನ 8-10 ವರ್ಷ ರಾಜಕಾರಣ ಮಾಡಬಹುದು. ಹೊಸಬರಿಗೆ ಅವಕಾಶಗಳು ಸಿಗಬೇಕು ಎಂದಿದ್ದಾರೆ.

A SYMBOL OF LOYALTY

A SYMBOL OF LOYALTY.. ನನ್ನ ಬಾಲ್ಯ, ಶೈಕ್ಷಣಿಕ ದಿನಗಳು ಹಾಗೂ ರಾಜಕೀಯ ಬೆಳವಣಿಗೆಯ ಹಾದಿಯನ್ನು ಪರಿಚಯಿಸುವ “A Symbol of Loyalty D K Shivakumar” ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಇಂದು ಪಾಲ್ಗೊಂಡೆ. ಕನ್ನಡ ಚಿತ್ರರಂಗದ ಯುವ ನಿರ್ದೇಶಕರಾದ ಶ್ರೀ ಕೆ.ಎಂ. ರಘು ಅವರು ಈ ಕೃತಿಯನ್ನು ರಚಿಸಿದ್ದು, ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ್ ಕಂಬಾರರು ಈ ಕೃತಿಯನ್ನು ಬಿಡುಗಡೆ ಮಾಡಿದ್ದು ನನ್ನ ಜೀವನದ ಹಾದಿಗೆ ಒಂದು ಅರ್ಥ ತಂದಿದೆ. ನಿಮ್ಮೆಲ್ಲರ ಈ ಪ್ರೀತಿ ನನಗೆ ಶ್ರೀರಕ್ಷೆ.. ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read