ಕಾರು ತಡೆದ ಪೊಲೀಸರಿಗೆ 2 ಗಂಟೆಯಲ್ಲಿ ನಿಮ್ಮ ʼಯೂನಿಫಾರ್ಮ್‌ʼ ತೆಗೆಸುತ್ತೇನೆಂದ ಆಹಂಕಾರಿ…!

ಅಹಂಕಾರದ ಸ್ಪಷ್ಟ ಉದಾಹರಣೆಯಲ್ಲಿ, ಐಷಾರಾಮಿ ಕಾರಿನಲ್ಲಿ ಹೋಗುತ್ತಿದ್ದ ಒಬ್ಬ ಶ್ರೀಮಂತ ವ್ಯಕ್ತಿ ಟ್ರಾಫಿಕ್ ಪೊಲೀಸರಿಗೆ ಬಾಯಿಗೆ ಬಂದಂತೆ ಬೈದಿದ್ದಲ್ಲದೆ ಬೆದರಿಕೆ ಹಾಕಿದ್ದಾನೆ.

ಈ ಘಟನೆಯು ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ (ಮೊದಲು ಔರಂಗಾಬಾದ್ ಎಂದು ಕರೆಯುತ್ತಿದ್ದರು) ನಡೆದಿದೆ. ಸೈರನ್ ಅನ್ನು ಆನ್ ಮಾಡಿ ತನ್ನ ಕಪ್ಪು ಡಿಫೆಂಡರ್ ಎಸ್‌ಯುವಿಯನ್ನು ಚಲಾಯಿಸುತ್ತಿದ್ದ ಕುನಾಲ್ ಬಕ್ಲಿವಾಲ್ ನನ್ನು ಟ್ರಾಫಿಕ್ ಪೊಲೀಸರು ತಡೆದಾಗ, ಬಕ್ಲಿವಾಲ್ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿ ಪೊಲೀಸರನ್ನು ನಿಂದಿಸಿದ್ದಾನೆ.

ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಐಷಾರಾಮಿ ಕಾರಿನಲ್ಲಿರುವ ವ್ಯಕ್ತಿಯು ಪೊಲೀಸರಿಗೆ ಬೆದರಿಕೆ ಹಾಕುತ್ತಿರುವುದನ್ನು ತೋರಿಸುತ್ತದೆ. “ನೀವು ನಾನು ಯಾರು ಎಂದು ಗುರುತಿಸುವುದಿಲ್ಲವೇ? ನಿಮ್ಮ ಯೂನಿಫಾರ್ಮ್ ಎರಡು ಗಂಟೆಯಲ್ಲಿ ತೆಗೆಸುತ್ತೇನೆ” ಎಂದು ಆತ ಹೇಳುತ್ತಿರುವುದಾಗಿ ಸೆರೆಯಾಗಿದೆ.

ಅವನ ಇಂತಹ ನಡವಳಿಕೆಯ ಹೊರತಾಗಿಯೂ, ಪೊಲೀಸರು ಕಾರನ್ನು ರಸ್ತೆ ಬದಿ ನಿಲ್ಲಿಸುವಂತೆ ಕೇಳಿದ್ದು, ಇದರಿಂದ, ಬಕ್ಲಿವಾಲ್ ನ ಕೋಪ ಉಲ್ಬಣಗೊಂಡಿದೆ. “ಟ್ರಾಫಿಕ್ ಅನ್ನು ಹೇಗೆ ನಿರ್ವಹಿಸಬೇಕೆಂದು ನಿಮಗೆ ತಿಳಿದಿಲ್ಲ. ನಾನು ಯಾರು ಗೊತ್ತಾ ? ” ಎಂದಿದ್ದಾನೆ.

ಪೊಲೀಸರು, ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿ ಬಕ್ಲಿವಾಲ್ ಬೆದರಿಕೆ ಹಾಕಿದ್ದು ಮತ್ತು ಪೊಲೀಸರ ಫೋಟೋಗಳನ್ನು ತೆಗೆದಿದ್ದು ಸೇರಿದಂತೆ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಅಂತಿಮವಾಗಿ, ಪೊಲೀಸರು ಅವನನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ.

ವರದಿಗಳ ಪ್ರಕಾರ, ಕುನಾಲ್ ಬಕ್ಲಿವಾಲ್ ಮತ್ತು ಅವರ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು, ಅವಮಾನಕರ ಭಾಷೆ ಬಳಸಿದ್ದು ಮತ್ತು ಬೆದರಿಕೆ ಹಾಕಿದ ಆರೋಪದ ಸೇರಿದಂತೆ ಅವರ ವಿರುದ್ಧ ಹಲವು ಪ್ರಕರಣ ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read