ಬೆಂಗಳೂರು : ನಾಳೆ ಕಿಚ್ಚ ಸುದೀಪ್ ಹುಟ್ಟುಹಬ್ಬ ಇರುವ ಹಿನ್ನೆಲೆ ಮಾಧ್ಯಮಗಳ ಜೊತೆ ನಟ ಸುದೀಪ್ ಮಾತನಾಡಿದ್ದಾರೆ. ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿರುವ ಬಗ್ಗೆ ಕಿಚ್ಚ ಸುದೀಪ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕಿಚ್ಚ ಸುದೀಪ್ ‘’ಸೂರ್ಯನೊಬ್ಬ, ಚಂದ್ರನೊಬ್ಬ. ಅವರು ಎಲ್ಲಿಲ್ಲಿ ಇರಬೇಕೋ ಅಲ್ಲಿ ಇದ್ದರೆ ಚೆಂದ’’ ಎಂದು ಇಬ್ಬರು ( ಸುದೀಪ್ –ದರ್ಶನ್ ) ಒಂದಾಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ನಾವ್ಯಾಕೆ ದೂರ ಆಗಿದ್ದೆವು ಎಂಬುದು ನಮ್ಮಿಬ್ಬರಿಗೆ ಮಾತ್ರ ಗೊತ್ತು. ಅಷ್ಟೇ ಸಾಕು. ಯಾರು ಏನು ಅಂದುಕೊಳ್ಳುತ್ತಾರೋ ನನಗೆ ಗೊತ್ತಿಲ್ಲ
ದರ್ಶನ್ ಸಿನಿಮಾಗೆ ಒಳ್ಳೆಯದಾಗಲಿ ಎಂದರು. ಹಾಗೂ ದರ್ಶನ್ ಪ್ರಕರಣದ ಬಗ್ಗೆ ನೋಡಿಕೊಳ್ಳಲು ಕಾನೂನು ಇದೆ, ಸರ್ಕಾರ ಇದೆ. ಆ ಬಗ್ಗೆ ನಾನು ಮಾತನಾಡಲ್ಲ ಎಂದರು.
ನಾನು ರಾಜಕೀಯಕ್ಕೆ ಬರುವ ಬಗ್ಗೆ ಗೊತ್ತಿಲ್ಲ. ಆದರೆ ರಾಜಕೀಯಕ್ಕೆ ಬಂದರೂ ನಾನು ಬದಲಾಗಲ್ಲ. ಬದಲಾಗದ ಹಾಗೆ ನನ್ನ ಬೋಲ್ಟು ನಟ್ಟು ನಾನೇ ಸರಿ ಮಾಡಿಕೊಳ್ಳುವೆ ಎಂದು ಕಿಚ್ಚ ಸುದೀಪ್ ಮಹತ್ವದ ಹೇಳಿಕೆ ನೀಡಿದ್ದಾರೆ.