ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಗಂಡ – ಹೆಂಡತಿ ಜಗಳ ಬೀದಿಗೆ ಬಂದಿದೆ. ರಸ್ತೆ ಮಧ್ಯೆ, ಪತ್ನಿಯೊಬ್ಬಳು ಪತಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಆಕೆ ಪತಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪತ್ನಿ, ಪತಿ ವಿರುದ್ಧ ದೂರು ನೀಡಲು ಮಹಿಳಾ ಪೊಲೀಸ್ ಠಾಣೆಗೆ ಹೋಗಿದ್ದಳು. ವಾಪಸ್ ಬರ್ತಿರುವ ವೇಳೆ ಸಿಕ್ಕ ಪತಿ ಜೊತೆ ಮತ್ತೆ ವಿವಾದ ಶುರುವಾಗಿದೆ. ಕೋಪಗೊಂಡ ಪತ್ನಿ, ಪತಿ ಮೋಹನ್ ಗೆ ಕಪಾಳಮೋಕ್ಷ ಮಾಡಿದ್ದಾಳೆ. ಗಲಾಟೆ ಬಿಡಿಸಲು ಬಂದ ಜನರಿಗೆ ಅವರಿಬ್ಬರು ಪತಿ – ಪತ್ನಿ ಎಂಬುದು ಗೊತ್ತಾಗಿದೆ.
ಪತಿ ಮೋಹನ್ ಪ್ರಕಾರ, ಅವರಿಬ್ಬರು ಐದು ವರ್ಷಗಳ ಹಿಂದೆ ಕೋರ್ಟ್ ನಲ್ಲಿ ಮದುವೆ ಆಗಿದ್ದಾರೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಇತ್ತೀಚಿಗೆ ತನ್ನ ಐಷಾರಾಮಿ ಜೀವನಕ್ಕಾಗಿ ಕುಟುಂಬದ ಭೂಮಿ ಮಾರಾಟ ಮಾಡುವಂತೆ ಪತ್ನಿ ಒತ್ತಡ ಹೇರುತ್ತಿದ್ದಾಳೆ. ಅದನ್ನು ವಿರೋಧಿಸಿದ್ದಕ್ಕಾಗಿ ಜಗಳ ಶುರುವಾಗಿದೆ ಎಂದು ಮೋಹನ್ ಹೇಳಿದ್ದಾನೆ. ನ್ಯಾಯ ನೀಡದೆ ಹೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೋಹನ್ ಎಚ್ಚರಿಸಿದ್ದಾನೆ. ಈ ಬಗ್ಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
https://twitter.com/last24hourindia/status/1817446500818944266?ref_src=twsrc%5Etfw%7Ctwcamp%5Etweetembed%7Ctwterm%5E1817446500818944266%7Ctwgr%5Ebb4e8c702e79c1953f8c26ba739cae6eb4f79919%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Futtarpradeshwifethrashesmaninmiddleofroadafterargumentinbahraichvideogoesviral-newsid-n624068871