Wife Swapping: ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಸ್ನೇಹಿತನೊಂದಿಗೆ ಕಾಲ ಕಳೆಯುವಂತೆ ಕಿರುಕುಳ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ವೈಫ್ ಸ್ವಾಪಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಸ್ನೇಹಿತನ ಜೊತೆ ಕಾಲ ಕಳೆಯುವಂತೆ ಪತಿ ಪತ್ನಿಗೆ ಪೀಡಿಸಿದ್ದಾನೆ.

ಇದಕ್ಕೆ ಒಪ್ಪದಿದ್ದಾಗ ಪತ್ನಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾನೆ ಎಂದು ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಪೂರ್ಣಚಂದ್ರ ಎಂಬುವನ ವಿರುದ್ಧ ಕಿರುಕುಳ, ಹಲ್ಲೆ ಆರೋಪ ಮಾಡಲಾಗಿದೆ,

ಬಸವನಗುಡಿ ನಿವಾಸಿಯಾಗಿರುವ ಪೂರ್ಣಚಂದ್ರ ಸ್ನೇಹಿತನೊಂದಿಗೆ ರಾತ್ರಿ ಕಾಲ ಕಳೆಯುವಂತೆ ಪತ್ನಿಗೆ ಪೀಡಿಸಿದ್ದಾನೆ. ವರ್ಷದ ಹಿಂದೆಯಷ್ಟೇ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಕಲ್ಯಾಣ ಮಂದಿರದಲ್ಲಿ ಪೂರ್ಣಚಂದ್ರನ ಜೊತೆಗೆ ಮದುವೆಯಾಗಿದ್ದು, ಸಾಲ ಮಾಡಿಕೊಂಡಿದ್ದ ಆರೋಪಿ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದ. ಹಣ ತರಲು ಒಪ್ಪದ ಕಾರಣ ಬೆಲ್ಟ್ ನಿಂದ ಹೊಡೆದು ಹಿಂಸೆ ನೀಡುತ್ತಿದ್ದ. ಮಹಿಳೆಯ ಸಹೋದರ ಎರಡು ಲಕ್ಷ ರೂ. ನೀಡಿದ್ದು, ಇನ್ನೂ ಎಂಟು ಲಕ್ಷ ನೀಡುವಂತೆ ಜಗಳವಾಡುತ್ತಿದ್ದ.

ಇತ್ತೀಚೆಗೆ ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಸ್ನೇಹಿತರೊಂದಿಗೆ ಸಹಕರಿಸುವಂತೆ ಪೀಡಿಸಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಹಲ್ಲೆ ಮಾಡಿದ್ದಾನೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಸ್ನೇಹಿತರು ಸೇರುವ ಪಾರ್ಟಿಗಳಲ್ಲಿ ಪತಿ ಪತ್ನಿ ಬದಲಾಯಿಸಿಕೊಳ್ಳುವ ವೈಫ್ ಸ್ವಾಪಿಂಗ್ ಸಂಸ್ಕೃತಿ ಇದೆ. ಕೇರಳದಲ್ಲಿಯೂ ಕೆಲವು ವರ್ಷಗಳ ಹಿಂದೆ ಇಂತಹ ಪ್ರಕರಣ ನಡೆದಿದ್ದವು. ಬೆಂಗಳೂರಿನಲ್ಲೂ ಕೆಲವು ಪ್ರಕರಣಗಳು ದಾಖಲಾಗಿದ್ದವು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read